AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಕೇಸ್​: ‘ಸುಜಾತಾ ಭಟ್ ತೋರಿಸಿದ್ದು ಅನನ್ಯಾ ಫೋಟೊ ಅಲ್ಲ’! ಮತ್ಯಾರದ್ದು? ಇಲ್ಲಿದೆ ನೋಡಿ

ಧರ್ಮಸ್ಥಳ ಕೇಸ್​: ‘ಸುಜಾತಾ ಭಟ್ ತೋರಿಸಿದ್ದು ಅನನ್ಯಾ ಫೋಟೊ ಅಲ್ಲ’! ಮತ್ಯಾರದ್ದು? ಇಲ್ಲಿದೆ ನೋಡಿ

Gopal AS
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 20, 2025 | 1:17 PM

Share

ಸುಜಾತ ಭಟ್​ ತೋರಿಸಿದ್ದು ಅನನ್ಯ ಫೋಟೋ ಅಲ್ಲ, ಅದು ನನ್ನ ಸಹೋದರಿ ವಾಸಂತಿ ಫೋಟೋ ಎಂದು ಎಂ.ವಿಜಯ್ ಅವರು ಹೇಳಿದ್ದಾರೆ. ನನ್ನ ಸಹೋದರಿ ವಾಸಂತಿ 2007ರಲ್ಲೇ ಮೃತಪಟ್ಟಿದ್ದಾಳೆ. ಈ ಪ್ರಕರಣದಲ್ಲಿ ತಮ್ಮ ತಂಗಿಯ ಹೆಸರು ಎಳೆದು ತಂದಿರುವುದಕ್ಕೆ ಎಂ.ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಡಗು, ಆಗಸ್ಟ್​ 20: ಸುಜಾತ ಭಟ್​ ತೋರಿಸಿದ್ದು ಅನನ್ಯ ಫೋಟೋ ಅಲ್ಲ, ಅದು ನನ್ನ ವಾಸಂತಿ ಸಹೋದರಿ ಫೋಟೋ ಎಂದು ಟಿವಿ9ಗೆ ವಾಸಂತಿ ಸಹೋದರ ಎಂ.ವಿಜಯ್ ಹೇಳಿದ್ದಾರೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಂಜರ್​ಪೇಟೆ ಗ್ರಾಮದಲ್ಲಿ ಪ್ರತಿಕ್ರಿಯಿಸಿದ ಅವರು, ಅದು ಅನನ್ಯ ಭಟ್ (Ananya Bhat) ಅಲ್ಲ, ನನ್ನ ಸಹೋದರಿ ವಾಸಂತಿ ಫೋಟೋ. ನನ್ನ ಸಹೋದರಿ ವಾಸಂತಿ 2007ರಲ್ಲೇ ಮೃತಪಟ್ಟಿದ್ದಾಳೆ. ಅವಳು ಶ್ರೀವತ್ಸ ಭಟ್ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ಶ್ರೀವತ್ಸ ಭಟ್​ಗೂ ಸುಜಾತಾ ಭಟ್​ಗೂ ಏನು ಸಂಬಂಧ ಗೊತ್ತಿಲ್ಲ. ಈ ಪ್ರಕರಣದಲ್ಲಿ ನನ್ನ ತಂಗಿ ಎಳೆದು ತಂದಿದ್ದು ಬೇಸರ ತರಿಸಿದೆ. ತಂಗಿಯ ಶವ 2007ರಲ್ಲಿ ನಿಗೂಢವಾಗಿ ಹೊಳೆಯಲ್ಲಿ ಪತ್ತೆ ಆಗಿತ್ತು. ಆ ಬಗ್ಗೆ ಸಿಐಡಿ ತನಿಖೆ ಆಗಿ ಆತ್ಮಹತ್ಯೆ ಅಂತಾ ವರದಿ ಬಂದಿತ್ತು. ಸುಜಾತಾ ಭಟ್ ಏಕೆ ನನ್ನ ತಂಗಿಯನ್ನು ಎಳೆದು ತಂದಿದ್ದಾರೆ ಗೊತ್ತಿಲ್ಲ ಎಂದು ವಿಜಯ್ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Aug 20, 2025 01:16 PM