Daily Devotional: ಗ್ರಹಗಳಿಂದಲೂ ಕಾಯಿಲೆ ಬರುತ್ತೆ, ಇದು ನಿಮಗೆ ತಿಳಿದಿದೆಯಾ?

|

Updated on: Aug 02, 2024 | 6:58 AM

ಆರೋಗ್ಯದ ಬಗ್ಗೆ ಎಷ್ಟೇ ಜಾಗ್ರತೆ ವಹಿಸಿದರೂ ಅನಾರೋಗ್ಯವು ಬೆನ್ನು ಹತ್ತಿಕೊಂಡೇ ಬರುತ್ತಿರುತ್ತದೆ. ಗ್ರಹಗಳಿಂದಲೇ ನಮಗೆ ಹಲವು ಅನಾರೋಗ್ಯ ಬಾಧೆಗಳು ಕಾಡುತ್ತವೆ. ಯಾವ ಗ್ರಹ ಯಾವ ಕಾಯಿಲೆ ಉಂಟುಮಾಡುತ್ತದೆ ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.

ಆರೋಗ್ಯ ಮೊದಲು, ಉಳಿದವುಗಳು ನಂತರ. ಆದರೆ, ಆರೋಗ್ಯದ ಬಗ್ಗೆ ಎಷ್ಟೇ ಜಾಗ್ರತೆ ವಹಿಸಿದರೂ ಅನಾರೋಗ್ಯವು ಬೆನ್ನು ಹತ್ತಿಕೊಂಡೇ ಬರುತ್ತಿರುತ್ತದೆ. ಸದಾ ಒಂದಿಲ್ಲೊಂದು ರೋಗ. ವೈದ್ಯರ ಬಳಿ ತೋರಿಸಿದರೂ ಕಡಿಮೆ ಆಗಲ್ಲ. ಕಡಿಮೆಯಾಯಿತೆಂದು ಭಾವಿಸಿದರೂ ಮತ್ತೆ ಅದೇ ರಾಗ, ಅದೇ ರೋಗ ಎನ್ನುವಂತಾಗಿರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದಕ್ಕೂ ಇದು ಕಾರಣ ಇರಬಹುದು. ಆದರೆ, ಗ್ರಹಗತಿಗಳು ಪ್ರಮುಖ ಕಾರಣವನ್ನು ವಹಿಸುತ್ತವೆ ಎನ್ನುವುದನ್ನು ಮಾತ್ರ ಮರೆಯಬಾರದು. ಒಂದೊಂದು ರೋಗಕ್ಕೆ ಒಂದೊಂದು ಗ್ರಹಗಳು ಕಾರಣ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಗ್ರಹಗಳು ನಮ್ಮ ಆರೋಗ್ಯದ ಉನ್ನತಿಗೂ ಕೆಡುಕಿಗೂ ಮೂಲ. ಗ್ರಹಗಳಿಂದಲೇ ನಮಗೆ ಹಲವು ಅನಾರೋಗ್ಯ ಬಾಧೆಗಳು ಕಾಡುತ್ತವೆ. ಯಾವ ಗ್ರಹ ಯಾವ ಕಾಯಿಲೆ ಉಂಟುಮಾಡುತ್ತದೆ ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ