ಸುಹಾಸ್ ಶೆಟ್ಟಿಯ ಚಲನವಲನಗಳ ಬಗ್ಗೆ ಹಂತಕರಿಗೆ ಮಾಹಿತಿ ನೀಡಿದ್ದು ಯಾರು? ಆರ್ ಅಶೋಕ, ವಿಪಕ್ಷ ನಾಯಕ

Updated on: May 02, 2025 | 1:02 PM

ಸರ್ಕಾರದ ಕುಮ್ಮಕ್ಕಿನಿಂದಲೇ ಇಂಥ ಕೃತ್ಯಗಳು ಜರುಗುತ್ತಿವೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪಾಕಿಸ್ತಾನ ಭಾರತವನ್ನು ಬೈದರೂ ಸರಿ, ಏನು ಮಾಡಿದರೂ ಸರಿ, ಅವರಿಗೆ ಏನೂ ಅನಿಸದು, ಎಮ್ಮೆ ಚರ್ಮದವರು, ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ಅಶೋಕ ಹೇಳಿದರು.

ಬೆಂಗಳೂರು, ಮೇ 2: ಸುಹಾಸ್ ಶೆಟ್ಟಿ ಕೊಲೆಗೆ (Suhas Shetty murder) ಪೊಲೀಸ್ ಇಲಾಖೆ ನೆರವಾಯ್ತೇ ಎಂಬ ಸಂಶಯವನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ಸುಹಾಸ್ ಎಲ್ಲಿದ್ದಾನೆ, ಅವನ ಬಳಿ ಯಾವುದಾದರೂ ಆಯುಧ ಇದೆಯಾ ಇಲ್ಲವಾ? ಅವನ ಚಲನವಲನಗಳ ಬಗ್ಗೆ ಹಂತಕರಿಗೆ ಗೊತ್ತಾಗಿದ್ದು ಹೇಗೆ, ನಮ್ಮ ಅಲ್ಲಿನ ಕಾರ್ಯಕರ್ತರು ಹೇಳುವ ಹಾಗೆ ಇಲಾಖೆಯ ಕೈವಾಡ ಇದೆಯಾ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು. ಇದಕ್ಕೆಲ್ಲ ಕಾರಣ ಸಿದ್ದರಾಮಯ್ಯ ಸರ್ಕಾರದ ನಿಷ್ಕ್ರಿಯತೆ ಮತ್ತು ಪಾಕಿಸ್ತಾನ ಪರ ಹೇಳಿಕೆಗಳು ಎಂದು ಅಶೋಕ ಹೇಳಿದರು.

ಇದನ್ನೂ ಓದಿ:  ಮಂಗಳೂರು: ಸುಹಾಸ್ ಹತ್ಯೆ ಬೆನ್ನಲ್ಲೇ ‘ಫಿನೀಶ್’ ಎಂಬ ಪೋಸ್ಟ್ ಬಹಿರಂಗ!

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ