ದೊಡ್ಮನೆಯಲ್ಲಿ ಈ ವಾರ ಮನೆಯಿಂದ ಹೊರಹೋಗುವವರು ಯಾರು?

| Updated By: ರಾಜೇಶ್ ದುಗ್ಗುಮನೆ

Updated on: Nov 18, 2023 | 8:54 AM

ವಿನಯ್​ ಗೌಡ, ಭಾಗ್ಯಶ್ರೀ, ತನಿಷಾ ಕುಪ್ಪಂಡ, ನೀತು ವನಜಾಕ್ಷಿ, ಈಶಾನಿ ಮೊದಲಾದವರು ಇದ್ದಾರೆ. ಈ ಪೈಕಿ ದೊಡ್ಮನೆಯಿಂದ ಹೊರ ಹೋಗುವವರು ಯಾರು ಅನ್ನೋ ಪ್ರಶ್ನೆ ಮೂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಸಾಕಷ್ಟು ಡ್ರಾಮಾಗಳು ನಡೆದು ಎಲಿಮಿನೇಷನ್ ಆಗಲೇ ಇಲ್ಲ. ಹೀಗಾಗಿ, ಈ ವಾರ ಒಬ್ಬರು ಔಟ್ ಆಗೋದು ಪಕ್ಕಾ. ಈ ವಾರದ ನಾಮಿನೇಷನ್​ ಲಿಸ್ಟ್​ನಲ್ಲಿ ವಿನಯ್​ ಗೌಡ (Vinay Gowda), ಭಾಗ್ಯಶ್ರೀ, ತನಿಷಾ ಕುಪ್ಪಂಡ, ನೀತು ವನಜಾಕ್ಷಿ, ಈಶಾನಿ ಮೊದಲಾದವರು ಇದ್ದಾರೆ. ಈ ಪೈಕಿ ದೊಡ್ಮನೆಯಿಂದ ಹೊರ ಹೋಗುವವರು ಯಾರು ಅನ್ನೋ ಪ್ರಶ್ನೆ ಮೂಡಿದೆ. ಈ ಬಾರಿಯ ಎಲಿಮಿನೇಷನ್​​ನಲ್ಲಿ ಏನಾದರೂ ಟ್ವಿಸ್ಟ್ ಇರಲಿದೆಯೇ ಎನ್ನುವ ಪ್ರಶ್ನೆಯೂ ಮೂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Nov 18, 2023 08:53 AM