ಅತ್ಯಾಚಾರ ಎಸಗಿದ ಮುನಿರತ್ನನನ್ನು ಬಿಜೆಪಿ ಇನ್ನೂ ಯಾಕೆ ಪಕ್ಷದಲ್ಲಿ ಉಳಿಸಿಕೊಂಡಿದೆ? ಪ್ರಿಯಾಂಕ್ ಖರ್ಗೆ

Updated on: May 22, 2025 | 2:09 PM

ಮುನಿರತ್ನ ವಿರುದ್ಧ ಇರೋದು ಆರೋಪಗಳಲ್ಲ, ಅವರ ಎಸಗಿದ ಅಪರಾಧಗಳು ಪ್ರೂವ್ ಆಗಿವೆ, ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ, ಎಫ್​ಎಸ್​ಎಲ್ ರಿಪೋರ್ಟ್ ಬಂದಿದೆ, ಸಂಸ್ಕೃತಿ ಬಗ್ಗೆ ಅಷ್ಟೆಲ್ಲ ಮಾತಾಡುವ ಬಿಜೆಪಿ ನಾಯಕರು ಮುನಿರತ್ನರನ್ನು ಯಾಕೆ ಪಕ್ಷದಲ್ಲಿ ಉಳಿಸಿಕೊಂಡಿದ್ದಾರೆ ಅನ್ನೋದನ್ನು ಮೊದಲು ಹೇಳಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು, ಮೇ 22: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ನೈತಿಕತೆ ಬಗ್ಗೆ ಪ್ರಶ್ನಿಸಿದರು. ಅವರು ಆರ್​ಅರ್​ ನಗರ ಶಾಸಕ ಮುನಿರತ್ನ (BJP MLA Munirathna) ಅವರನ್ನು ಇನ್ನೂ ಯಾಕೆ ಪಕ್ಷದಲ್ಲ ಇಟ್ಟುಕೊಂಡಿದ್ದಾರೆ? ಜಾತಿ ನಿಂದನೆ ಮಾಡಿದವನನ್ನು, ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿ, ಅತ್ಯಾಚಾರ ಎಸಗಿದವನನ್ನು ಪಕ್ಷದಲ್ಲಿ ಇಟ್ಟುಕೊಂಡಿರುವುದಕ್ಕೆ ಕಾರಣವೇನು? ಯಾರು ಏನೇನು ಮಾಡಿದ್ದಾರೆ ಅಂತ ಕೂತು ಚರ್ಚೆ ಮಾಡೋಣ, ಬಿಜೆಪಿ ನಾಯಕರು ಚರ್ಚೆಗೆ ಬರಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಇದನ್ನೂ ಓದಿ:   ಹಿಂದೂಗಳು ಟಾರ್ಗೆಟ್ ಆಗಿದ್ದನ್ನು ಅಲ್ಲಗಳೆಯುವ ಪ್ರಿಯಾಂಕ್ ಖರ್ಗೆ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ: ಚಲವಾದಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ