ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಸಿದ್ದರಾಮಯ್ಯ ಕಾಂಗ್ರೆಸ್ ಗೆದ್ದರೆ ಯಾರೂ ತನ್ನನ್ನು ಮುಟ್ಟಲಾಗಲ್ಲ ಅಂತ ಹೇಳಿದ್ದು ಯಾಕೆ?

|

Updated on: Apr 01, 2024 | 7:11 PM

ಸುನಿಲ್ ಬೋಸ್ ರನ್ನು ಗೆಲ್ಲಸಿದ್ದೇಯಾದಲ್ಲಿ ಯಾರೂ ತನ್ನನ್ನು ಮುಟ್ಟುವುದು ಸಾಧ್ಯವಿಲ್ಲ ಅಂತ ಸಿದ್ದರಾಮಯ್ಯ ಬಿಜೆಪಿ ಜೆಡಿಎಸ್ ಪಕ್ಷಗಳ ನಾಯಕರ ವಿಷಯವಾಗಿ ಹೇಳಿದರೋ ಅಥವಾ ತಮ್ಮ ಪಕ್ಷದಲ್ಲಿನ ಎದುರಾಳಿಗಳನ್ನು ಉಲ್ಲೇಖಿಸಿ ಹೇಳಿದರೋ ಗೊತ್ತಾಗಲಿಲ್ಲ.

ಮೈಸೂರು: ಚಾಮರಾಜನಗರದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ (Sunil Bose) ಪರ ಸಿದ್ದರಾಮಯ್ಯ (Siddaramaiah) ಇಂದು ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದರು. ವರುಣಾ ಕ್ಷೇತ್ರದವರು 2013 ವಿಧಾನಸಭಾ ಚುನಾಣೆಯಲ್ಲಿ ಯತೀಂದ್ರ (Yathindra Siddaramaiah) ಅವರನ್ನು 58,000 ವೋಟುಗಳ ಭಾರಿ ಬಹುಮತದೊಂದಿಗೆ ಗೆಲ್ಲಿಸಿದ್ದರು. 2023ರಲ್ಲಿ ತನ್ನನ್ನು 48,000 ವೋಟುಗಳ ಅಂತರದಿಂದ ಗೆಲ್ಲಿಸಿದ್ದರು. ಈ ಕ್ಷೇತ್ರದಿಂದ ಒಮ್ಮೆ ಯತೀಂದ್ರ, ಒಮ್ಮೆ ಮಹದೇವಪ್ಪ ಮತ್ತು 3 ಬಾರಿ ತಾನು ಶಾಸಕರಾಗಿ ಆಯ್ಕೆಯಾಗಿದ್ದೇವೆ. ಅದರೆ, 2019 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಧ್ರುವನಾರಾಯಣ ಕೇವಲ 1,817 ಮತಗಳ ಅಂತರದಿಂದ ಸೋತಿದ್ದರು. ವರುಣಾ ಕ್ಷೇತ್ರದವರು ಕೇವಲ 3,000 ವೋಟುಗಳ ಲೀಡ್ ಕೊಟ್ಟಿದ್ದರೆ ಧ್ರುವನಾರಾಯಣ ಗೆಲ್ಲುತ್ತಿದ್ದರು. ಹಾಗಾಗಿ ಈ ಬಾರಿ ಅಂಥ ಸಂದರ್ಭ ಸೃಷ್ಟಿಯಾಗಬಾರದು ಎಂದು ಹೇಳಿದ ಸಿದ್ದರಾಮಯ್ಯ, ಸುನಿಲ್ ಬೋಸ್ ರನ್ನು ಗೆಲ್ಲಿಸ್ತೀರಲ್ವ ಅಂತ 3-4 ಸಲ ಜನರನ್ನು ಕೇಳಿದರು. ಅವರನ್ನು ಗೆಲ್ಲಸಿದ್ದೇಯಾದಲ್ಲಿ ಯಾರೂ ತನ್ನನ್ನು ಮುಟ್ಟುವುದು ಸಾಧ್ಯವಿಲ್ಲ ಅಂತ ಸಿದ್ದರಾಮಯ್ಯ ಬಿಜೆಪಿ ಜೆಡಿಎಸ್ ಪಕ್ಷಗಳ ನಾಯಕರ ವಿಷಯವಾಗಿ ಹೇಳಿದರೋ ಅಥವಾ ತಮ್ಮ ಪಕ್ಷದಲ್ಲಿನ ಎದುರಾಳಿಗಳನ್ನು ಉಲ್ಲೇಖಿಸಿ ಹೇಳಿದರೋ ಗೊತ್ತಾಗಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ:  ನಾನು ಇರಬೇಕು ಅಂದ್ರೆ ವರುಣಾದಲ್ಲಿ 60 ಸಾವಿರ ಲೀಡ್​ ಕೊಡಿ: ಸಿದ್ದರಾಮಯ್ಯ ಈ ರೀತಿ ಹೇಳಿಕೆ ಹಿಂದಿನ ಮರ್ಮವೇನು?