ನಿಮ್ಮ ಅಪ್ಪನ್ನನ್ನು ಏಕೆ ಜೈಲಿಗೆ ಕಳುಹಿಸಿದೆ? ವಿಜಯೇಂದ್ರಗೆ ಡಿಕೆ ಶಿವಕುಮಾರ್​ ಪ್ರಶ್ನೆ

|

Updated on: Aug 05, 2024 | 1:37 PM

ಭ್ರಷ್ಟಾಚಾರ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ವಾಗ್ಯುದ್ಧ ನಡೆಯುತ್ತಿದೆ. ತಮನ್ನು ಭ್ರಷ್ಟಾಚಾರದ ಪಿತಾಮಹ ಎಂದು ಕರೆದಿದ್ದ ಬಿವೈ ವಿಜಯೇಂದ್ರ ಅವರಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭ್ರಷ್ಟಾಚಾರದ ಪಿತಾಮಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆರೋಪ ಮಾಡಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ವಿಜಯೇಂದ್ರ ನನಗೆ ಭ್ರಷ್ಟಾಚಾರ ಪಿತಾಮಹ ಎಂದಿದ್ದಾನೆ. ನೀನು ಹೇಳಪ್ಪಾ ನಿಮ್ಮ ಅಪ್ಪನ್ನ ಜೈಲಿಗೆ ಏಕೆ ಕಳಿಸಿದೆ?ಯಾಕೆ ರಾಜೀನಾಮೆ ಕೊಡಿಸಿದೆ? ಏನಾಯ್ತು ಅಂತ ಹೇಳು? ನಿನ್ನ ಲೆಕ್ಕಾಚಾರ ಹೇಳು ಎಂದು ಪ್ರಶ್ನಿಸಿದರು.

ಈ ಎಲ್ಲ ಪ್ರಶ್ನೆಗಳಿಗೆ ಮೊದಲು ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್, ಗೂಳಿಹಟ್ಟಿ ಶೇಖರ್ ಅವರಿಗೆ ಉತ್ತರ ಕೊಡು. ನಂತರ ನನಗೆ ಉತ್ತರ ಕೊಡು, ಈ ಎಲ್ಲ ಪ್ರಶ್ನೆಗಳಿಗೆ ಚನ್ನಪಟ್ಟಣದಲ್ಲಿ ಉತ್ತರ ಕೊಡಬೇಕು ಎಂದು ಹೇಳಿದರು.

ಭ್ರಷ್ಟಾಚಾರ ಪಿತಾಮಹ ಅನ್ನಲು ಕಾರಣ

ಬಿವೈ ವಿಜಯೇಂದ್ರ ಅವರು ಮಾಡಿದ ಭ್ರಷ್ಟಾಚಾರ ಬಿಚ್ಚಿಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಡಿಕೆ ಶಿವಕುಮಾರ್ ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಅವರ ಬಳಿ ಭ್ರಷ್ಟಾಚಾರದ ಬಗ್ಗೆ ಹೇಳಿಸಿಕೊಳ್ಳುವ ದಿನಗಳು ಬಂದಿಲ್ಲ. ಡಿಕೆ ಶಿವಕುಮಾರ್ ಭ್ರಷ್ಟಾಚಾರದ ಪಿತಾಮಹ ಎಂದು ತಿರುಗೇಟು ನೀಡಿದ್ದರು.

ಇದನ್ನೂ ಓದಿ: ಸಂಪತ್ತಿಗೆ ಸವಾಲ್​: ಮೊದ್ಲು ನಿನ್ನ ಸೋದರನ ಲೆಕ್ಕ ಕೊಡು ಕುಮಾರಸ್ವಾಮಿ ಎಂದ ಡಿಕೆ ಶಿವಕುಮಾರ್​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Aug 05, 2024 01:05 PM