ಸಿದ್ದರಾಮಯ್ಯರಿಂದ ಪ್ರಮಾದ ಜರುಗಿರದಿದ್ದರೆ ಮುಡಾ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ಯಾಕೆ? ಅರ್ ಅಶೋಕ

|

Updated on: Sep 03, 2024 | 3:16 PM

ಮಾನ್ಯ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುವ ಕಾಂಗ್ರೆಸ್ ನಾಯಕರು, ಮುಡಾ ಪ್ರಕರಣದಲ್ಲಿ ಯಾವುದೇ ಅಕ್ರಮ ಜರುಗಿಲ್ಲವೆಂದು ಹೇಳುತ್ತಾರಾದರೂ ಮುಡಾ ಅಧಿಕಾರಿ ದಿನೇಶ್ ಕುಮಾರ್ ರನ್ನು ಯಾಕೆ ಸಸ್ಪೆಂಡ್ ಮಾಡಿದ್ದು ಅಂತ ಕೇಳಿದರೆ ನಿರುತ್ತರರಾಗುತ್ತಾರೆ ಎಂದು ಅಶೋಕ ಹೇಳಿದರು.

ಬೆಂಗಳೂರು: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ವಿಪಕ್ಷ ನಾಯಕ ಆರ್ ಅಶೋಕ ಸರ್ಕಾರದ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿ ಹೈಕಮಾಂಡ್ ಅವರನ್ನು ಪದೇಪದೆ ದೆಹಲಿಗೆ ಕರೆಸಿ ತಾಕೀತು ಮಾಡಿದರೂ ಕಾಂಗ್ರೆಸ್ ನಾಯಕರು ಯಾವುದೇ ತಪ್ಪು ನಡೆದಿಲ್ಲವೆಂದು ಹೇಳುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ ಎಂದರು. ಹಿಂದುಳಿದ ವರ್ಗಗಳ ನಾಯಕನೆಂಬ ಕಾರಣಕ್ಕೆ ತನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸಿಎಂ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ವಿಚಾರ: ಒಟ್ಟಿಗೆ ಹೋದ್ರೆ ಇಬ್ಬರಿಗೂ ಲಾಭವೆಂದ ಆರ್​ ಅಶೋಕ್