ಬಿಜೆಪಿ ಸರ್ಕಾರದ ಹಗರಣಗಳನ್ನು ತನಿಖೆ ಮಾಡಿಸುವೆನೆನ್ನುವ ಸಿದ್ದರಾಮಯ್ಯ ಇಷ್ಟು ದಿನ ಕಾದಿದ್ದೇಕೆ? ಕುಮಾರಸ್ವಾಮಿ

|

Updated on: Jul 20, 2024 | 1:55 PM

ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಒಪ್ಪಿಕೊಳ್ಳುವ ಸಿದ್ದರಾಮಯ್ಯ ತಪ್ಪನ್ನೆಲ್ಲ ಅಧಿಕಾರಿಗಳ ಮೇಲೆ ಹಾಕುತ್ತ್ತಾರೆ, ಅದರೆ ಅಧಿಕಾರಿಗಳಿಂದ ಅವ್ಯವಹಾರ ನಡೆದರೂ ಅದರ ಹೊಣೆಗಾರಿಕೆ ಸರ್ಕಾರದ ಮೇಲಿರುತ್ತದೆ, ಅವರನ್ನು ಮಾತ್ರ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಿ ತಮ್ಮ ಮಂತ್ರಿಗಳನ್ನು ಬಚಾವು ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಹುಬ್ಬಳ್ಳಿ: ಕಾರವಾರದ ಶಿರೂರು ಬಳಿ 5 ದಿನಗಳ ಹಿಂದೆ ಸಂಭವಿಸಿದ ಗುಡ್ಡ ಕುಸಿತವನ್ನು ವೀಕ್ಷಿಸಲು ತೆರಳುವ ಮುನ್ನ ನಗರದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು, ನಿನ್ನೆ ವಿಧಾನಸಬೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಆಡಳಿತಾವಧಿಯಲ್ಲಿ ನಡೆದ 21 ಹಗರಣಗಳನ್ನು ತನಿಖೆ ಒಪ್ಪಿಸುತ್ತೇನೆಂದು ಹೇಳಿರುವುದನ್ನು ಗೇಲಿ ಮಾಡಿದರು. ಅವರು ಹೇಳಿದ್ದನ್ನು ಟಿವಿಯಲ್ಲಿ ತಾನು ವೀಕ್ಷಿಸಿದೆ ಎಂದು ಹೇಳಿದ ಕುಮಾರಸ್ವಾಮಿ, 2011 ಮತ್ತು 2012 ರಲ್ಲಿ ನಡೆದ ಹಗರಣಗಳ ಬಗ್ಗೆ ಸಿದ್ದರಾಮಯ್ಯ ಯಾರಿಂದಲೋ ಬರೆಸಿಕೊಂಡು ಬಂದು ಸದನದಲ್ಲಿ ಓದಿದ್ದಾರೆ. 2013 ರಿಂದ 2018ರವರೆಗೆ ರಾಜ್ಯದಲ್ಲಿ ಅವರ ಸರ್ಕಾರವೇ ಇತ್ತು, ಅಗ ಯಾಕೆ ಸುಮ್ಮನಿದ್ದರು? ಈಗಲೂ ಅವರ ಸರ್ಕಾರ ಅಡಳಿತ ನಡೆಸಲಾರಂಭಿಸಿ ಒಂದು ವರ್ಷ ಕಳೆದಿದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಅವರು ಹೀಗೆ ಗುಮ್ಮ ಸೃಷ್ಟಿಸುತ್ತಿದ್ದಾರೆ ಮತ್ತೇನೂ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಈ ರೀತಿಯ ಆಡಳಿತನ್ನು ಹಿಂದೆ ತಾನ್ಯಾವತ್ತೂ ನೋಡಿರಲಿಲ್ಲ ಎಂದು ಕೇಂದ್ರ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆನಗಾನಹಳ್ಳಿ ಜಮೀನು ಹಗರಣ ಮುಚ್ಚಿಸಲು ಶಿವಕುಮಾರ್ ಕೋಟ್ಯಾಂತರ ಹಣ ಖರ್ಚುಮಾಡಿದ್ದಾರೆ: ಕುಮಾರಸ್ವಾಮಿ

Follow us on