ಬೆಳಗಾವಿ: ಕರ್ತವ್ಯನಿರತರಾಗಿದ್ದಾಗಲೇ ಮರಣಿಸಿದ ಯೋಧನ ಪತ್ನಿ ಬಿಕ್ಕುತ್ತಲೇ ಧ್ವಜ ಸ್ವೀಕರಿಸಿ ಮಿಲಿಟರಿ ಸಲ್ಯೂಟ್ ಮಾಡಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 14, 2022 | 4:09 PM

ಪತಿಯನ್ನು ಕಳೆದುಕೊಂಡು ರೋದಿಸುತ್ತಿದ್ದ ಶಂಕರ ಅವರ ಪತ್ನಿಗೆ ಮಿಲಿಟರಿ ಸಂಪ್ರದಾಯದಂತೆ ರಾಷ್ಟ್ರಧ್ವಜವನ್ನು ನೀಡುವಾಗ ಬಿಕ್ಕುತ್ತಲೇ ಅವರು ಅದನ್ನು ಸ್ವೀಕರಿಸಿದರು ಮತ್ತು ಸಲ್ಯೂಟ್ ಮಾಡಿದರು.

ಬೆಳಗಾವಿ: ಇದು ಹೃದಯ ಕಲಕುವ ದೃಶ್ಯ. 13 ವರ್ಷಗಳಿಂದ ಸೇನೆ ಸಲ್ಲಿಸುತ್ತಿದ್ದ ಶಂಕರ ಯಲಿಗಾರ (Shankar Yaligar) ಅವರು ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ (Aurangabad) ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾಯತಕ್ಕೊಳಗಾಗಿ ಮೃತಪಟ್ಟರು. ಅವರ ದೇಹವನ್ನು ಬೆಳಗಾವಿ ಜಿಲ್ಲೆಯ ಸ್ವಗ್ರಾಮ ಮೇಲ್ಮಟ್ಟಿಗೆ (Melmatti) ಬುಧವಾರ ತರಲಾಯಿತು. ಈ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡು ರೋದಿಸುತ್ತಿದ್ದ ಶಂಕರ ಅವರ ಪತ್ನಿಗೆ ಮಿಲಿಟರಿ ಸಂಪ್ರದಾಯದಂತೆ ರಾಷ್ಟ್ರಧ್ವಜವನ್ನು ನೀಡುವಾಗ ಬಿಕ್ಕುತ್ತಲೇ ಅವರು ಅದನ್ನು ಸ್ವೀಕರಿಸಿದರು ಮತ್ತು ಸಲ್ಯೂಟ್ ಮಾಡಿದರು. ಸಕಲ ಸರ್ಕಾರೀ ಮತ್ತು ಮಿಲಿಟರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ಮೇಲ್ಮಟ್ಟಿಯಲ್ಲಿ ನಡೆಸಲಾಯಿತು.