ಬಂಡೀಪುರ ಊಟಿ ಮಾರ್ಗದಲ್ಲಿ ಸುಂಕ ಕೊಡದೆ ಮುಂದಕ್ಕೋಗಲು ಬಿಡಲ್ಲ ಈ ಗಜರಾಜ! ವಿಡಿಯೋ ನೋಡಿ
ಬಂಡೀಪುರ ಊಟಿ ರಸ್ತೆಯಲ್ಲಿ ಕಾಡಾನೆ ಹಾವಳಿ: ಕಾಡಿನ ದಾರಿಯಾಗಿ ಹೋಗುತ್ತೀರಾದರೆ ನನಗೂ ತರಕಾರಿ ಕೊಟ್ಟು ಹೋಗು ಎನ್ನುತ್ತಿದೆಯೇ ಈ ಕಾಡಾನೆ!? ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗವೊಂದು ಗೂಡ್ಸ್ ಲಾರಿಗಳನ್ನು ತಪಾಸಣೆ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ.
ಚಾಮರಾಜನಗರ, ಸೆಪ್ಟೆಂಬರ್ 3: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ, ಬಂಡೀಪುರ ಊಟಿ ಮಾರ್ಗದಲ್ಲಿ ಒಂಟಿ ಸಲಗವೊಂದು ತರಕಾರಿ ಸಾಗಿಸುವ ವಾಹನಗಳಿಗೆ ಸದಾ ಕಾಟ ಕೊಡುತ್ತಲೇ ಇದೆ. ಕಬ್ಬು, ಬಾಳೆ, ತರಕಾರಿ ವಾಹನಗಳನ್ನೇ ಗುರಿಯಾಗಿಸುವ ಈ ಕಾಡಾನೆ, ಟಾರ್ಪಲ್ ಹಾಕಿದ ಲಾರಿಗಳನ್ನೂ ಬಿಡದೆ ತಪಾಸಣೆ ನಡೆಸುತ್ತಿದೆ. ಇಂದೂ ಸಹ ಇಂಥದ್ದೇ ಘಟನೆ ನಡೆದಿದೆ. ಅಂದಹಾಗೆ, ಈ ಕಾಡಾನೆಯ ಹಾವಳಿಗೆ ವಾಹನ ಸವಾರರು, ಲಾರಿ ಚಾಲಕರು, ಅದರಲ್ಲೂ ತರಕಾರಿ ಲಾರಿಗಳ ಚಾಲಕರು ಕಂಗಾಲಾಗಿದ್ದಾರೆ. ಅರಣ್ಯ ಸಿಬ್ಬಂದಿ ಓಡಿಸಲು ಮುಂದಾದರೂ, ಪಟಾಕಿ ಸಿಡಿಸಿ ಹೆದರಿಸಲು ಮುಂದಾದರೂ ಕ್ಯಾರೇ ಅನ್ನದ ಈ ಆನೆ, ಆಗಾಗ್ಗೆ ತರಕಾರಿ ಲಾರಿಗಳನ್ನು ಹುಡುಕುತ್ತಾ ಬರುತ್ತಲೇ ಇರುತ್ತದೆ. ಕಾಡಾನೆ ಕಿರಿಕ್ ಮಾಡುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.
