ಬಂಡೀಪುರ ಊಟಿ ಮಾರ್ಗದಲ್ಲಿ ಸುಂಕ ಕೊಡದೆ ಮುಂದಕ್ಕೋಗಲು ಬಿಡಲ್ಲ ಈ ಗಜರಾಜ! ವಿಡಿಯೋ ನೋಡಿ

Edited By:

Updated on: Sep 03, 2025 | 12:17 PM

ಬಂಡೀಪುರ ಊಟಿ ರಸ್ತೆಯಲ್ಲಿ ಕಾಡಾನೆ ಹಾವಳಿ: ಕಾಡಿನ ದಾರಿಯಾಗಿ ಹೋಗುತ್ತೀರಾದರೆ ನನಗೂ ತರಕಾರಿ ಕೊಟ್ಟು ಹೋಗು ಎನ್ನುತ್ತಿದೆಯೇ ಈ ಕಾಡಾನೆ!? ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗವೊಂದು ಗೂಡ್ಸ್ ಲಾರಿಗಳನ್ನು ತಪಾಸಣೆ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ.

ಚಾಮರಾಜನಗರ, ಸೆಪ್ಟೆಂಬರ್ 3: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ, ಬಂಡೀಪುರ ಊಟಿ ಮಾರ್ಗದಲ್ಲಿ ಒಂಟಿ ಸಲಗವೊಂದು ತರಕಾರಿ ಸಾಗಿಸುವ ವಾಹನಗಳಿಗೆ ಸದಾ ಕಾಟ ಕೊಡುತ್ತಲೇ ಇದೆ. ಕಬ್ಬು, ಬಾಳೆ, ತರಕಾರಿ ವಾಹನಗಳನ್ನೇ ಗುರಿಯಾಗಿಸುವ ಈ ಕಾಡಾನೆ, ಟಾರ್ಪಲ್ ಹಾಕಿದ ಲಾರಿಗಳನ್ನೂ ಬಿಡದೆ ತಪಾಸಣೆ ನಡೆಸುತ್ತಿದೆ. ಇಂದೂ ಸಹ ಇಂಥದ್ದೇ ಘಟನೆ ನಡೆದಿದೆ. ಅಂದಹಾಗೆ, ಈ ಕಾಡಾನೆಯ ಹಾವಳಿಗೆ ವಾಹನ ಸವಾರರು, ಲಾರಿ ಚಾಲಕರು, ಅದರಲ್ಲೂ ತರಕಾರಿ ಲಾರಿಗಳ ಚಾಲಕರು ಕಂಗಾಲಾಗಿದ್ದಾರೆ. ಅರಣ್ಯ ಸಿಬ್ಬಂದಿ ಓಡಿಸಲು ಮುಂದಾದರೂ, ಪಟಾಕಿ ಸಿಡಿಸಿ ಹೆದರಿಸಲು ಮುಂದಾದರೂ ಕ್ಯಾರೇ ಅನ್ನದ ಈ ಆನೆ, ಆಗಾಗ್ಗೆ ತರಕಾರಿ ಲಾರಿಗಳನ್ನು ಹುಡುಕುತ್ತಾ ಬರುತ್ತಲೇ ಇರುತ್ತದೆ. ಕಾಡಾನೆ ಕಿರಿಕ್ ಮಾಡುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More