ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ

Updated By: Ganapathi Sharma

Updated on: May 06, 2025 | 7:32 AM

ಚಾಮರಾಜನಗರ ತಮಿಳುನಾಡು ಗಡಿ ಭಾಗದ ದಿಂಬಂ ಘಾಟ್​ನಲ್ಲಿ ಕಾಡಾನೆ ಹಾವಳಿ ಸಾಮಾನ್ಯ. ಆಗಾಗ್ಗೆ ವಾಹನ ಸಾವರರಿಗೆ ಕಾಡಾನೆಗಳು ಕಾಣಿಸಿಕೊಳ್ಳುವುದು, ಕೆಲವು ಬಾರಿ ಅವು ವಾಹನಗಳನ್ನು ಅಟ್ಟಾಡಿಸಿಕೊಂಡು ಹೋದ ವಿದ್ಯಮಾನಗಳೂ ನಡೆದಿವೆ. ಇದೀಗ, ಕಾಡಾನೆಯೊಂದು ಘಾಟ್ ರಸ್ತೆಯಲ್ಲಿ ಬಿದ್ದಿದ್ದ ರಾಶಿ ರಾಶಿ ಟೊಮೆಟೋವನ್ನು ಖಾಲಿ ಮಾಡಿದೆ.

ಚಾಮರಾಜನಗರ, ಮೇ 6: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಹವಾ ಮುಂದುವರಿದಿದೆ. ಕರ್ನಾಟಕ ಹಾಗೂ ತಮಿಳುನಾಡು ಬೆಸೆಯುವ ದಿಂಬಂ ಘಾಟ್​​ನಲ್ಲಿ ಬೊಲೆರೊ ವಾಹನ ಪಲ್ಟಿಯಾಗಿ ಟೊಮ್ಯಾಟೊ ಲೋಡ್ ರಸ್ತೆಯಲ್ಲಿ ಬಿದ್ದಿತ್ತು. ರಾಶಿ ರಾಶಿ ಟೊಮೆಟೊ ಚೆಲ್ಲಿತ್ತು. ಬಳಿಕ ವಾಹನ ಹಾಗೂ ಕ್ರೇಟ್​​​ಗಳನ್ನು ತೆಗೆದುಕೊಂಡು ಹೋಗಲಾಗಿತ್ತು. ರಸ್ತೆಯಲ್ಲಿ ಬಿದ್ದು ಅಪ್ಪಚ್ಚಿಯಾಗಿದ್ದ ಟೊಮೆಟೋವನ್ನು ಅಲ್ಲೇ ಬಿಡಲಾಗಿತ್ತು. ಟೊಮೆಟೋ ವಾಸನೆ ಹಿಡಿದು ರಸ್ತೆಗೆ ನುಗ್ಗಿದ ಕಾಡಾನೆಯೊಂದು ಅವುಗಳನ್ನೆಲ್ಲ ತಿಂದು ಖಾಲಿ ಮಾಡಿದೆ. ಕಾಡಾನೆ ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.