ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು, ಗದ್ದೆ ಸಂಪೂರ್ಣ ನಾಶ!

Edited By:

Updated on: Nov 25, 2026 | 12:11 PM

ಹಾಸನದಿಂದ ಬಂದ 39 ಕಾಡಾನೆಗಳು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಲ್ಲೂರು ಗ್ರಾಮದ ಭತ್ತದ ಗದ್ದೆಗಳನ್ನು ನಾಶಪಡಿಸಿವೆ. ಸುಮಾರು 25ಕ್ಕೂ ಹೆಚ್ಚು ಆನೆಗಳು ರಾತ್ರಿ ವೇಳೆ ಗದ್ದೆಗೆ ನುಗ್ಗಿ, ಕಟಾವಿಗೆ ಬಂದಿದ್ದ ಬೆಳೆಯನ್ನು ಸಂಪೂರ್ಣ ಹಾಳುಮಾಡಿವೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸಿದ್ದು, ನಿರಂತರ ಆನೆಗಳ ಸಂಚಾರದಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಚಿಕ್ಕಮಗಳೂರು, ನವೆಂಬರ್ 25: ಹಾಸನದಿಂದ ಚಿಕ್ಕಮಗಳೂರು ಜಿಲ್ಲೆಗೆ ಬಂದಿರುವ ಕಾಡಾನೆಗಳ ಹಾವಳಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟು 39 ಕಾಡಾನೆಗಳ ಹಿಂಡು ಮೂಡಿಗೆರೆ ತಾಲೂಕಿನ ಗೂಣಿಬೀಡು ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿದೆ. ಇವುಗಳಲ್ಲಿ 25ಕ್ಕೂ ಹೆಚ್ಚು ಆನೆಗಳು ನೆನ್ನೆ ರಾತ್ರಿ ಕೆಲ್ಲೂರು ಗ್ರಾಮದ ಭತ್ತದ ಗದ್ದೆಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ.

ಕಟಾವಿಗೆ ಸಿದ್ಧವಾಗಿದ್ದ ಭತ್ತದ ಬೆಳೆಯನ್ನು ಕಾಡಾನೆಗಳು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದು, ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಕಾಡಾನೆಗಳು ಕಾಫಿ ತೋಟಗಳ ಮೂಲಕ ಬಂದು ಗದ್ದೆಗಳಿಗೆ ನುಗ್ಗಿದ್ದು, ಆಹಾರದ ಕೊರತೆಯೇ ಈ ಆನೆಗಳು ವಸತಿ ಪ್ರದೇಶಗಳತ್ತ ಬರುವುದಕ್ಕೆ ಕಾರಣ ಎನ್ನಲಾಗಿದೆ. ಆನೆಗಳ ಹಿಂಡಿನಲ್ಲಿ ಮರಿಯಾನೆಗಳೂ ಸಹ ಇರುವುದರಿಂದ, ಅವು ಮಾನವರ ಮೇಲೆ ದಾಳಿ ಮಾಡುವ ಭೀತಿ ಗ್ರಾಮಸ್ಥರಲ್ಲಿದೆ. ಆನೆಗಳನ್ನು ದೂರವಿಡಲು ಗ್ರಾಮಸ್ಥರು ಬೆಂಕಿ ಹಾಕಿ ಹೊಗೆಯನ್ನು ಬಳಸುತ್ತಿದ್ದಾರೆ. ಆನೆಗಳ ನಿರಂತರ ಸಂಚಾರದಿಂದಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More