ಆನೆ ಬಂತೊಂದ್ ಆನೆ; ರಸ್ತೆ ಮಧ್ಯೆ ಓಡಾಡುತ್ತ ವಾಹನಗಳ ತಪಾಸಣೆ ನಡೆಸಿದ ಒಂಟಿ ಸಲಗ, ಉಸಿರು ಬಿಗಿ ಹಿಡಿಯುವ ದೃಶ್ಯ

| Updated By: ಆಯೇಷಾ ಬಾನು

Updated on: Feb 01, 2024 | 9:55 AM

ಆಹಾರ ಅರಸಿ ಬಂದ ಒಂಟಿ ಸಲಗ ವಾಹನಗಳ ಬಳಿ ತೆರಳಿ ತರಕಾರಿಗಾಗಿ ಶೋಧ ನಡೆಸಿದ ಘಟನೆ ತಮಿಳುನಾಡಿನ ಗೇರುಮಾಳದ ರಸ್ತೆಯಲ್ಲಿ ನಡೆದಿದೆ. ತರಕಾರಿಗಾಗಿ ಹುಡುಕಾಟ ನಡೆಸಿದ ಒಂಟಿ ಸಲಗದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಚಾಮರಾಜನಗರ, ಫೆ.01: ತಮಿಳುನಾಡಿನ ಗೇರುಮಾಳದ ರಸ್ತೆಯಲ್ಲಿ ಒಂಟಿ ಸಲಗವೊಂದು (Elephant) ರಸ್ತೆ ಮಧ್ಯೆ ಬಿಂದಾಸ್ ಆಗಿ ಓಡಾಡುತ್ತ ವಾಹನ ಸವಾರರಿಗೆ ಭಯ ಹುಟ್ಟಿಸಿದೆ. ನಡು ರಸ್ತೆಯಲ್ಲಿ ಗಜರಾಜನ ಸಂಚಾರ ನೋಡಿ ವಾಹನ ಸವಾರರು ಕೆಲ ಕ್ಷಣ ಭಯದಲ್ಲಿ ನಡುಗುವಂತಾಗಿತ್ತು. ಸಾಮಾನ್ಯವಾಗಿ ಈ ಮಾರ್ಗದಲ್ಲಿ ವಾಹನ ಸವಾರರು ತರಕಾರಿಗಳನ್ನ ರಫ್ತು ಮಾಡುತ್ತಾರೆ. ಹೀಗಾಗಿ ಆಹಾರ ಅರಸಿ ಬಂದ ಒಂಟಿ ಸಲಗ ವಾಹನಗಳ ಬಳಿ ತೆರಳಿ ತರಕಾರಿಗಾಗಿ ಶೋಧ ನಡೆಸಿದೆ.

ವಾಹನಗಳನ್ನ ಅಡ್ಡಗಟ್ಟಿ ತರಕಾರಿಗಾಗಿ ಹುಡುಕಾಟ ನಡೆಸಿದೆ. ವಾಹನಗಳಲ್ಲಿದ್ದ ಖಾಲಿ ತರಕಾರಿ ಕ್ರೇಟ್ ಗಳನ್ನ ನೋಡಿ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ ತೆರಳಿದೆ. ತರಕಾರಿಗಾಗಿ ಹುಡುಕಾಟ ನಡೆಸಿದ ಒಂಟಿ ಸಲಗದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬೃಹತ್ ದಂತವುಳ್ಳ ಕಾಡಾನೆ ರಸ್ತೆ ಮಧ್ಯೆ ನಡೆದುಕೊಂಡು ಬಂದು ವಾಹನಗಳ ತಪಾಸನೆ ನಡೆಸಿ ಯಾರ ಮೇಲೂ ಹಲ್ಲೆ ನಡೆಸದೆ ಹಿಂದಿರುಗಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on