ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್ ಮಿಥುನ್

Updated By: Digi Tech Desk

Updated on: May 02, 2025 | 5:13 PM

ಎಸ್​​ಎಸ್​ಎಲ್​​ಸಿ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶ ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಕಲಬುರಗಿ ಜಿಲ್ಲೆ ಕೊಲೆ ಸ್ಥಾನದಲ್ಲಿದೆ. ಇನ್ನು ಬೆಂಗಳೂರಿನ ಹೋಲಿ ಚೈಲ್ಡ್ ಇಂಗ್ಲೀಷ್ ಹೈಸ್ಕೂಲ್ ವಿದ್ಯಾರ್ಥಿ ಮಿಥುನ್ 625ಕ್ಕೆ 624 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಇನ್ನು ಮುಂದೆ ಏನಾಗಬೇಕೆಂದು ಕನಸು ಇದೆ ಎಂದು ಹೇಳಿದರೆ ಯೋಗಿ ಆದಿತ್ಯನಾಥ್ ರಂತೆ ರಾಜಕೀಯ ನಾಯಕ ಆಗುತ್ತೇನೆ ಎಂದಿದ್ದಾರೆ

ಬೆಂಗಳೂರು, (ಮೇ 02): 2024-25ನೇ ಸಾಲಿನ ಎಸ್​​ಎಸ್​ಎಲ್​​ಸಿ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶ ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಕಲಬುರಗಿ ಜಿಲ್ಲೆ ಕೊಲೆ ಸ್ಥಾನದಲ್ಲಿದೆ. ಇನ್ನು ಬೆಂಗಳೂರಿನ ಹೋಲಿ ಚೈಲ್ಡ್ ಇಂಗ್ಲೀಷ್ ಹೈಸ್ಕೂಲ್ ವಿದ್ಯಾರ್ಥಿ ಮಿಥುನ್ 625ಕ್ಕೆ 624 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಇನ್ನು ಮುಂದೆ ಏನಾಗಬೇಕೆಂದು ಕನಸು ಇದೆ ಎಂದು ಕೇಳಿದರೆ ಯೋಗಿ ಆದಿತ್ಯನಾಥ್ ರಂತೆ ರಾಜಕೀಯ ನಾಯಕ ಆಗುತ್ತೇನೆ ಎಂದಿದ್ದಾರೆ. ಈ ಬಗ್ಗೆ ಟಿವಿ9 ಜತೆ ಮಾತನಾಡಿದ ಮಿಥುನ್​, ನಾನು ರಾಜಕೀಯ ನಾಯಕ ಆಗಬೇಕು. ಯೋಗಿ ಆದಿತ್ಯನಾಥ್ ರೀತಿ ಡೇರಿಂಗ್ ಪೊಲಿಟಿಷಿಯನ್ ಆಗುತ್ತೇನೆ ಎಂದು ಹೇಳಿದ್ದಾರೆ.

Published on: May 02, 2025 03:19 PM