ಎಲ್ಲ ಶಕ್ತಿಗಳಿಗಿಂತ ಪ್ರಾಮಾಣಿಕತೆಯ ಶಕ್ತಿ ಬಹಳ ದೊಡ್ಡದು: ಹೆಚ್ ವಿಶ್ವನಾಥ, ವಿಧಾನ ಪರಿಷತ್ ಸದಸ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 21, 2022 | 5:14 PM

ಸರಕಾರದಲ್ಲಿ ಇಚ್ಛಾಶಕ್ತಿಯ ಕೊರತೆಯಿಲ್ಲ ಅದರೆ ಪ್ರಾಮಾಣಿಕತೆ ಎಲ್ಲಕ್ಕಿಂತ ದೊಡ್ಡ ಶಕ್ತಿ. ಒಂದು ಉತ್ತಮ ಬದಲಾವಣೆ ತರಬೇಕಾದರೆ ಪ್ರಾಮಾಣಿಕತೆ ಬೇಕು. ಬದಲಾವಣೆ ಗುಣಾತ್ಮಕವಾಗಿರಬೇಕೇ ಹೊರತು ವಿಜಯೇಂದ್ರರನ್ನು ಸಂಪುಟಕ್ಕೆ ತರಲು ಬದಲಾವಣೆಯ ಪ್ರಯತ್ನಗಳನ್ನು ಮಾಡಬಾರದು ಎಂದು ವಿಶ್ವನಾಥ ಹೇಳಿದರು.

Mysuru: 1970 ರಿಂದ ರಾಜಕೀಯದಲ್ಲಿರುವ ಹೆಚ್ ವಿಶ್ವನಾಥ (H Vishwanath) ಅವರು ರಾಜ್ಯ ಮೂರೂ ಪ್ರಮುಖ ಪಕ್ಷಗಳಿಗೆ ದುಡಿದವರು. ಮೊದಲು ಜೆಡಿ(ಎಸ್), ಅಮೇಲೆ ಕಾಂಗ್ರೆಸ್ ಮತ್ತು ಈಗ ಬಿಜೆಪಿ. ವಿವಿಧ ಖಾತೆಗಳ ಸಚಿವರಾಗಿಯೂ ಅವರು ಕೆಲಸ ಮಾಡಿದ್ದಾರೆ ಮತ್ತು ಒಮ್ಮೆ ಸಂಸದರಾಗಿಯೂ (MP) ಲೋಕಸಭೆ ಪ್ರವೇಶಿಸಿದ್ದಾರೆ. ಕವಿ ಮತ್ತು ಸಾಹಿತಿಯಾಗಿ ಸಹ ಗುರುತಿಸಿಕೊಂಡಿರುವ ವಿಶ್ವನಾಥ ಪಕ್ಷದ ನಾಯಕತ್ವವನ್ನು ಪ್ರಶ್ನಿಸಿ ವಿವಾದಕ್ಕೀಡಾಗುತ್ತಾರೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ (coalition government) ಉರುಳಲು ಕಾರಣರಾದ 17 ಬಿಜೆಪಿಯೇತರ ಶಾಸಕರಲ್ಲಿ ವಿಶ್ವನಾಥ ಕೂಡ ಒಬ್ಬರು. ಆದರೆ ನಂತರ ನಡೆದ ಉಪಚುನಾವಣೆಯಲ್ಲಿ ಅವರು ಸೋತರು. ಅವರನ್ನು ಪಕ್ಷದ ಪ್ರಮುಖ ಸದಸ್ಯನೆಂದು ಪರಿಗಣಿಸಿದ ಬಿಜೆಪಿ ವಿಧಾನ ಪರಿಷತ್ ಗೆ ಆಯ್ಕೆ ಮಾಡಿಕೊಂಡಿತು.

ವಿಶ್ವನಾಥ ಅವರ ಬಗ್ಗೆ ಮಾತಾಡುತ್ತಿರುವುದಕ್ಕೆ ಕಾರಣವಿದೆ ಮಾರಾಯ್ರೇ. ಅವರು ಬಿಜೆಪಿ ಸೇರುವಾಗ ಮಂತ್ರಿಯಾಗುವ ಕನಸ್ಸು ಕಂಡಿದ್ದರು. ಅದು ಈಡೇರುತ್ತಿಲ್ಲ. ನಿರಾಶರಾಗಿರುವ ಕವಿ-ಹೃದಯಿ ರಾಜಕಾರಣಿ ಪಕ್ಷದ ನಾಯಕತ್ವವನ್ನು ಇಲ್ಲೂ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅನುಭವದ ಕೊರತೆಯಿಂದಾಗಿ ಸಚಿವ ಸ್ಥಾನ ಸಿಗುತ್ತಿಲ್ಲವೇ ಎಂದು ಶನಿವಾರ ಮೈಸೂರಲ್ಲಿ ಮಾಧ್ಯಮದವರು ಕೇಳಿದಾಗ ಅನುಭವದ ಕೊರತೆ ಅಲ್ಲ, ಸರ್ಕಾರದಲ್ಲಿ ಪ್ರಾಮಾಣಕತೆಯ ಕೊರತೆಯಿದೆ ಎಂದರು.

ಸರಕಾರದಲ್ಲಿ ಇಚ್ಛಾಶಕ್ತಿಯ ಕೊರತೆಯಿಲ್ಲ ಅದರೆ ಪ್ರಾಮಾಣಿಕತೆ ಎಲ್ಲಕ್ಕಿಂತ ದೊಡ್ಡ ಶಕ್ತಿ. ಒಂದು ಉತ್ತಮ ಬದಲಾವಣೆ ತರಬೇಕಾದರೆ ಪ್ರಾಮಾಣಿಕತೆ ಬೇಕು. ಬದಲಾವಣೆ ಗುಣಾತ್ಮಕವಾಗಿರಬೇಕೇ ಹೊರತು ವಿಜಯೇಂದ್ರರನ್ನು ಸಂಪುಟಕ್ಕೆ ತರಲು ಬದಲಾವಣೆಯ ಪ್ರಯತ್ನಗಳನ್ನು ಮಾಡಬಾರದು ಎಂದು ವಿಶ್ವನಾಥ ಹೇಳಿದರು.

ಮಂತ್ರಿ ಸ್ಥಾನಕ್ಕಾಗಿ ತಮ್ಮ ಹೋರಾಟವಂತೂ ನಡೆದೇ ಇದೆ ಆದರೆ ಪಕ್ಷದ ನಾಯಕತ್ವ ಅದನ್ನು ನೀಡಬೇಕಲ್ಲ ಅಮರ ಅವರು ನಿರಾಶೆಯ ಭಾವದಲ್ಲಿ ಹೇಳಿದರು.

ಇದನ್ನೂ ಓದಿ:   Rakhi Sawant: ತನಗಿಂತ 6 ವರ್ಷ ಕಿರಿಯ ಹುಡುಗನ ಜತೆ ಪ್ರೀತಿಯಲ್ಲಿ ಬಿದ್ದ ರಾಖಿ; ಮೈಸೂರು ಮೂಲದ ಹುಡುಗನ ಬಗ್ಗೆ ನಟಿ ಹೇಳಿದ್ದೇನು?