ಟಾಪ್ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ
ಗಿಲ್ಲಿ ನಟ ಅವರು ಬಿಗ್ ಬಾಸ್ ವಿನ್ನರ್ ಆಗಬಹುದು ಎಂಬುದು ಎಲ್ಲರ ಊಹೆ. ಈಗ ಒಬ್ಬರು ಟಾಪ್ 6ನಿಂದ ಔಟ್ ಆಗೋ ಸಮಯ. ಈ ಸಾಲಿನಲ್ಲಿ ಯಾರಿದ್ದಾರೆ ಎಂಬ ಕುತೂಹಲ ಮೂಡಿದೆ. ಟಾಪ್ 6ರಿಂದ ಒಬ್ಬರು ಎಲಿಮಿನೇಟ್ ಆಗಿದ್ದು, ಅದು ಯಾರು ಎಂಬ ಪ್ರಶ್ನೆ ಮೂಡಿದೆ. ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಯಾರು ಮೊದಲು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಹೀಗಿರುವಾಗಲೇ ಮೊದಲ ಎಲಿಮಿನೇಷನ್ ನಡೆದಿದೆ. ಅತಿ ಕಡಿಮೆ ವೋಟ್ ಪಡೆದು ಒಬ್ಬರು ಹೊರ ಬಂದಿದ್ದಾರೆ. ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎನಿಸುತ್ತದೆ ಎಂದು ಗಿಲ್ಲಿ ಹೇಳಿದ್ದಾರೆ. ಅವರು ಹೀಗೇಕೆ ಹೇಳಿದರು ಎಂಬುದಕ್ಕೆ ಉತ್ತರ ಶೋನಲ್ಲಿ ಸಿಗಲಿದೆ. ಮೊದಲ ಎಲಿಮಿನೇಷನ್ನಲ್ಲಿ ಧನುಶ್ ಹೊರ ಹೋಗಿದ್ದಾರೆ ಎಂದು ವರದಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 18, 2026 03:41 PM
