ವಿಂಗ್ ಕಮಾಂಡರ್ ಸುಳ್ಳು ವಿಡಿಯೋಗಳನ್ನು ಹರಿಬಿಟ್ಟು ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾನೆ: ರೂಪೇಶ್ ರಾಜಣ್ಣ, ಕನ್ನಡಪರ ಹೋರಾಟಗಾರ

Updated on: Apr 22, 2025 | 10:23 AM

ವಿಕಾಸ್ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದು ವಿಂಗ್ ಕಮಾಂಡರ್, ಆದರೆ ಅವನೇ ಹುಡುಗನ ವಿರುದ್ಧ ದೂರು ಸಲ್ಲಿಸಿ ಅವನು ಜೈಲು ಸೇರುವಂತೆ ಮಾಡಿದ್ದಾನೆ, ಆದರೆ ಅವನು ಆರಾಮಾಗಿ ಹೊರಗಡೆ ಓಡಾಡಿಕೊಂಡಿದ್ದಾನೆ, ಅಸಲಿಗೆ ನಡೆದಿದ್ದೇನು ಎಂದು ತೋರಿಸುವ ವಿಡಿಯೋ ಹೊರಗೆ ಬರದಿದ್ದರೆ ಅಮಾಯಕ ವಿಕಾಸ್ ನಿರಪರಾಧಿ ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ ಎಂದು ರೂಪೇಶ್ ರಾಜಣ್ಣ ಹೇಳಿದರು.

ಬೆಂಗಳೂರು, ಏಪ್ರಿಲ್ 22: ಕನ್ನಡದ ಹುಡುಗ ವಿಕಾಸ್ ಮೇಲೆ ಹಲ್ಲೆ ಮಾಡಿರುವ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಕನ್ನಡ ಹೋರಾಟಗಾರು (pro Kannada activists) ರೊಚ್ಚಿಗೆದ್ದಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಕಮಾಂಡರ್ ಸುಳ್ಳು ವಿಡಿಯೋಗಳನ್ನು ಸೋಶಿಯಲ್ ಮಿಡಿಯದಲ್ಲಿ ಹಾಕಿ, ಕನ್ನಡ ಮಾತಾಡಿಲ್ಲ ಅನ್ನೋ ಕಾರಣಕ್ಕೆ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಬಿಂಬಿಸಿ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ. ಗೃಹ ಮಂತ್ರಿಯವರು ತಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ದುರಹಂಕಾರದಿಂದ ಮೆರೆಯುತ್ತಿರುವ ಕಮಂಡರ್​​ನನ್ನು ಬಂಧಿಸಬೇಕು ಎಂದು ಹೇಳಿದರು

ಇದನ್ನೂ ಓದಿ:   ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ವೈದ್ಯೆಯಿಂದ ಅತ್ತೆ-ಮಾವನ ಮೇಲೆ ಹಲ್ಲೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ