ಪೆಟ್ರೋಲ್ ಬೆಲೆ ಕೇವಲ ಏರುಮುಖವಾಗಿರುವುದರಿಂದ ಉತ್ತಮ ಮೈಲೇಜ್​​ನ ಟಿವಿಎಸ್ ರೆಡಿಯಾನ್ ಬೈಕ್ ಹೊಸ ಆಶಾಕಿರಣವೆನಿಸುತ್ತಿದೆ!

ಪೆಟ್ರೋಲ್ ಬೆಲೆ ಕೇವಲ ಏರುಮುಖವಾಗಿರುವುದರಿಂದ ಉತ್ತಮ ಮೈಲೇಜ್​​ನ ಟಿವಿಎಸ್ ರೆಡಿಯಾನ್ ಬೈಕ್ ಹೊಸ ಆಶಾಕಿರಣವೆನಿಸುತ್ತಿದೆ!

TV9 Web
| Updated By: shruti hegde

Updated on: Oct 28, 2021 | 7:47 AM

ಉತ್ತಮ ಮೈಲೇಜ್ ಅಂದಾಕ್ಷಣ ಟಿವಿಎಸ್ ಕಂಪನಿ ಲಾಂಚ್ ಮಾಡಿರುವ ಹೊಸ ಬೈಕ್ ಟಿವಿಎಸ್ ರೆಡಿಯಾನ್ ನೆನಪಾಗುತ್ತದೆ. ಇದು ಕಂಪನಿ ಕ್ಲೇಮ್ ಮಾಡಿರುವ ಪ್ರಕಾರ ಲೀಟರ್ ಗೆ 70ಕ್ಕಿಂತ ಜಾಸ್ತಿ ಕಿಮೀ ಓಡುತ್ತದೆ

ಬೆಂಗಳೂರಿನಲ್ಲಿ ಕೆಲವೇ ವಾರಗಳ ಹಿಂದೆ ಪೆಟ್ರೋಲ್ ಬಂಕ್ನಲ್ಲಿ 100 ರೂ. ನೀಡಿದರೆ ನಿಮ್ಮ ಬೈಕ್ ಫ್ಯುಯೆಲ್ ಟ್ಯಾಂಕ್ನಲ್ಲಿ 1.14 ಲೀಟರ್ ಪೆಟ್ರೋಲ್ ಬೀಳುತಿತ್ತು. ಈಗ ಅದೇ 100 ರೂ. ಗಳಿಗೆ ಕೇವಲ 0.89 ಲೀಟರ್ ಪೆಟ್ರೋಲ್ ಮಾತ್ರ ಬಂಕ್ನವರು ಹಾಕುತ್ತಾರೆ. ಅದರರ್ಥ ಸಿಂಪಲ್ ಮಾರಾಯ್ರೇ. ಪೆಟ್ರೋಲ್ ಬೆಲೆ ಈಗ ಲೀಟರ್ ಗೆ 112 ರೂ ಆಗಿದೆ. ಡೀಸೆಲ್ ಬೆಲೆಯೂ ಶತಕ ಬಾರಿಸಿದೆ. ಪೆಟ್ರೋಲ್ಗೆ ನೀರಿನಂತೆ ಹಣ ಸುರಿಸುವುದನ್ನು ನಿಲ್ಲಿಸಲು ನಮ್ಮಲ್ಲಿ ಎರಡು ಅಥವಾ ಮೂರು ಆಪ್ಷನ್ಗಳಿವೆ. ಒಂದು, ಬೇಗ ಒಂದು ಎಲೆಕ್ಟ್ರಿಕ್ ವಾಹನನ ಬುಕ್ ಮಾಡಿ ಅದರ ಡೆಲಿವರಿಗಾಗಿ ಕಾಯುವುದು ಎರಡನೇಯದ್ದು ಈಗ ಲಭ್ಯವಿರುವ ಟೂ ವೀಲರ್ಗಳಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಗಾಡಿಯನ್ನು ಆರಿಸಿಕೊಳ್ಳುವುದು. ಮೂರನೇಯ ಆಪ್ಷನ್ ನಿಮ್ಮ ಜೇಬು ಮತ್ತು ಆರೋಗ್ಯ-ಎರಡಕ್ಕೂ ಒಳ್ಳೆಯದು; ಒಂದು ಸೈಕಲ್ ಖರೀದಿಸುವುದು!

ಉತ್ತಮ ಮೈಲೇಜ್ ಅಂದಾಕ್ಷಣ ಟಿವಿಎಸ್ ಕಂಪನಿ ಲಾಂಚ್ ಮಾಡಿರುವ ಹೊಸ ಬೈಕ್ ಟಿವಿಎಸ್ ರೆಡಿಯಾನ್ ನೆನಪಾಗುತ್ತದೆ. ಇದು ಕಂಪನಿ ಕ್ಲೇಮ್ ಮಾಡಿರುವ ಪ್ರಕಾರ ಲೀಟರ್ ಗೆ 70ಕ್ಕಿಂತ ಜಾಸ್ತಿ ಕಿಮೀ ಓಡುತ್ತದೆ, ನಗರ ಪ್ರದೇಶಗಳ ಹೊರಭಾಗದಲ್ಲಿ 80 ಕಿಮೀವರೆಗೂ ಅದು ಓಡಿದೆಯಂತೆ. ಸಿಟಿಗಳಲ್ಲಿ 70 ಕಿಉತ್ತಮ ಮೈಲೇಜ್ ಅಂದಾಕ್ಷಣ ಟಿವಿಎಸ್ ಕಂಪನಿ ಲಾಂಚ್ ಮಾಡಿರುವ ಹೊಸ ಬೈಕ್ ಟಿವಿಎಸ್ ರೆಡಿಯಾನ್ ನೆನಪಾಗುತ್ತದೆ. ಇದು ಕಂಪನಿ ಕ್ಲೇಮ್ ಮಾಡಿರುವ ಪ್ರಕಾರ ಲೀಟರ್ ಗೆ 70ಕ್ಕಿಂತ ಜಾಸ್ತಿ ಕಿಮೀ ಓಡುತ್ತದೆಮೀ/ಲೀಟರ್ ಮೈಲೇಜ್ ನಿಸ್ಸಂದೇಹವಾಗಿ ಅತ್ಯುತ್ತಮ.

ಪರಿಣಿತರ ಪ್ರಕಾರ, ಟಿವಿಎಸ್ ಸಂಸ್ಥೆಯ ಎಲ್ಲ ಉತ್ಪಾದನೆಗಳ ಹಾಗೆ ರೆಡಿಯಾನ್ ಬೈಕಿನ ಲುಕ್ಸ್ ಮತ್ತು ಸಾಮರ್ಥ್ಯ ಆದ್ಭುತವಾಗಿವೆ. ಈ ಬೈಕ್ 4 ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಪರ್ಪಲ್ ಬಣ್ಣದಲ್ಲಿ ಅತ್ಯಾಕರ್ಷಕವಾಗಿ ಕಾಣುತ್ತದೆ. ಹಬ್ಬಗಳ ಸೀಸನ್ ಪ್ರಯುಕ್ತ ಬೈಕನ್ನು ಕಡಿಮೆ ಬೆಲೆಗೆ ಮಾರಲಾಗುತ್ತಿದೆಯಾದರೂ ಬೈಕ್ ಸೆಗ್ಮೆಂಟ್ ನಲ್ಲಿ ಇದೇ ಅತ್ಯಂತ ಕಡಿಮೆ ಬೆಲೆಯ ದ್ವಿಚಕ್ರ ವಾಹನ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ ಟಿವಿಎಸ್ ರೆಡಿಯಾನ್ ಎಕ್ಸ್ ಶೋರೂಮ್ ಬೆಲೆ ರೂ. 69,000 ಆಗಿದೆ. ನಿಮಗೆ ಡಿಸ್ಕ್ ಬ್ರೇಕ್ ಆವೃತ್ತಿ ಬೇಕಿದ್ದರೆ ರೂ.72,000 ಗಳಿಗೆ ಸಿಗಲಿದೆ.

ಇದನ್ನೂ ಓದಿ:   Viral Video: ಸಾಂಪ್ರದಾಯಿಕ ಉಡುಗೆ ತೊಟ್ಟು ಸ್ಕೇಟಿಂಗ್​ನಲ್ಲೇ ರಾಜಸ್ಥಾನಿ ಜಾನಪದ ನೃತ್ಯ ಮಾಡಿದ ಯುವತಿ; ಇಲ್ಲಿದೆ ವಿಡಿಯೋ