ಶಾಸಕ ಅರವಿಂದ ಲಿಂಬಾವಳಿ ಸಾರ್ವಜನಿಕವಾಗಿ ಹಲ್ಲೆ ಮಾಡಲು ಮುಂದಾಗಿದ್ದರು ಅಂತ ಒಬ್ಬ ಮಹಿಳೆ ಆರೋಪಿಸಿದ್ದಾರೆ!
ಹೋಗೇ ಬಾರೇ ಅಂತ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತಾಡಿದರು ಮತ್ತು ಕೊನೆಯಲ್ಲಿ ತಮ್ಮ ಮೇಲೆ ಹಲ್ಲೆ ಮಾಡಲು ಕೂಡ ಮುಂದಾದರು ಅಂತ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು: ಸಾರ್ವಜನಿಕವಾಗಿ ಜನರ ಮೇಲೆ ಕೋಪ ಪ್ರದರ್ಶಿಸುವುದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ (Arvind Limbavali) ಹೊಸತೇನೂ ಅಲ್ಲ. ಅವರು ಪ್ರತಿನಿಧಿಸುವ ಮಹಾದೇವಪುರದ (Mahadevapura) ಮಹಿಳೆ ರೂತ್ ಎಸ್ ಸಗಾಯಿ (Ruth S Sagai Mary) ಅವರು ಶಾಸಕರು ಸಾರ್ವಜನಿಕವಾಗಿ ತಮ್ಮನ್ನು ನಿಂದಿಸಿದರು, ಹೋಗೇ ಬಾರೇ ಅಂತ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತಾಡಿದರು ಮತ್ತು ಕೊನೆಯಲ್ಲಿ ತಮ್ಮ ಮೇಲೆ ಹಲ್ಲೆ ಮಾಡಲು ಕೂಡ ಮುಂದಾದರು ಅಂತ ಗಂಭೀರ ಆರೋಪ ಮಾಡಿದ್ದಾರೆ. ನೀವೇ ಕೇಳಿಸಿಕೊಳ್ಳಿ.