Video: ಮಹಿಳೆಯಿಂದ ಹೆಚ್ಚುವರಿ ಹಣ ಪಡೆದು ಟಿಕೆಟ್ ಕೊಡದೆ ಕಳಿಸಿದ ರೈಲ್ವೆ ಬುಕಿಂಗ್ ಸಿಬ್ಬಂದಿ
ರೈಲ್ವೆ ಟಿಕೆಟ್ ಕೌಂಟರ್ನಲ್ಲಿರುವ ಸಿಬ್ಬಂದಿ ಮಹಿಳೆಯಿಂದ ಹೆಚ್ಚುವರಿ ಹಣ ಪಡೆದು, ಟಿಕೆಟ್ ಕೂಡ ಕೊಡದೆ ಕಳುಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಡ ಮಹಿಳೆಯೊಬ್ಬರು ರೈಲ್ವೆ ಟಿಕೆಟ್ಗಾಗಿ ಬುಕಿಂಗ್ ಕ್ಲರ್ಕ್ಗೆ ಸಾವಿರ ರೂ. ನೀಡಿದ್ದರು. ಅವರಿಗೆ ಯಾವುದೇ ಟಿಕೆಟ್ ಕೊಡದೆ, 200 ರೂ. ಅವರಿಟ್ಟುಕೊಂಡು 800 ರೂ.ವಾಪಸ್ ಕೊಟ್ಟಿದ್ದಾರೆ.
ನವದೆಹಲಿ, ಫೆಬ್ರವರಿ 26: ರೈಲ್ವೆ ಟಿಕೆಟ್ ಕೌಂಟರ್ನಲ್ಲಿರುವ ಸಿಬ್ಬಂದಿ ಮಹಿಳೆಯಿಂದ ಹೆಚ್ಚುವರಿ ಹಣ ಪಡೆದು, ಟಿಕೆಟ್ ಕೂಡ ಕೊಡದೆ ಕಳುಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಡ ಮಹಿಳೆಯೊಬ್ಬರು ರೈಲ್ವೆ ಟಿಕೆಟ್ಗಾಗಿ ಬುಕಿಂಗ್ ಕ್ಲರ್ಕ್ಗೆ ಸಾವಿರ ರೂ. ನೀಡಿದ್ದರು. ಅವರಿಗೆ ಯಾವುದೇ ಟಿಕೆಟ್ ಕೊಡದೆ, 200 ರೂ. ಅವರಿಟ್ಟುಕೊಂಡು 800 ರೂ.ವಾಪಸ್ ಕೊಟ್ಟಿದ್ದಾರೆ.
ರೈಲ್ವೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಕೌಂಟರ್ನಲ್ಲಿ ಟಿಕೆಟ್ ಕೇಳಿದರೂ ಕೊಡದೆ ವಾಪಸ್ ಕಳುಹಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆ 112ಕ್ಕೆ ಕರೆ ಮಾಡಿದರೂ ಕೂಡಲೇ ಸಹಾಯಕ್ಕೆ ಬರಲಿಲ್ಲ ಎಂದು ಆಕೆ ದೂರಿದ್ದಾರೆ. ಆಕೆ ಬಡ ಮಹಿಳೆ ಧ್ವನಿ ಎತ್ತುವುದಿಲ್ಲ ಎಂದು ಭಾವಿಸಿರಬೇಕು, ಇದು 200 ರೂ. ಪ್ರಶ್ನೆಯಲ್ಲ, ಇದು ದುರಹಂಕಾರ, ಶೋಷಣೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡಲೇ ಪರಿಶೀಲಿಸಬೇಕು, ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಂದು ಒತ್ತಾಯಿಸಲಾಗುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

