ಪಾವಗಡ ಬಸ್ ದುರಂತ: ಒಬ್ಬಳನ್ನು ಕಳೆದುಕೊಂಡು ಮತ್ತೊಬ್ಬಳು ಕಾಲು ಮುರಿದುಕೊಂಡಿರುವುದನ್ನು ಕಂಡು ಈ ತಾಯಿ ಗೋಳಾಡುತ್ತಿದ್ದಾಳೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 19, 2022 | 6:57 PM

ಒಬ್ಬ ಚಾಲಕನ ಅಜಾಗರೂಕತೆ ಮತ್ತು ರೆಕ್ಲೆಸ್ ಡ್ರೈವಿಂಗ್ ಎಂಥ ಅನಾಹುತಗಳನ್ನು ಸೃಷ್ಟಿಸುತ್ತದೆ ನೋಡಿ. ಅವನ ತಪ್ಪಿಗೆ ಈ ತಾಯಿ ತನ್ನ ಬದುಕಿನಿಡೀ ಕೊರಗಬೇಕು. ಆಕೆಗೆ ಮಾತಾಡುವುದು ಸಾಧ್ಯವಾಗುತ್ತಿಲ್ಲ. ಗಾಯಗೊಂಡಿರುವ ಮಗಳು ಚೇತರಿಸಿಕೊಳ್ಳಲು ಎಷ್ಟು ದಿನಗಳು ಬೇಕೋ?

ಈ ತಾಯಿಯ ಗೋಳು, ಆಕ್ರಂದನ ನೋಡಲಾಗಲ್ಲ ಮಾರಾಯ್ರೇ. ಅವರ ಇಬ್ಬರು ಹೆಣ್ಣು ಮಕ್ಕಳು ಶುಕ್ರವಾರ ಬೆಳಗ್ಗೆ ಪಾವಗಡದ ಬಳಿ ಚಾಲಕನ ಅಜಾಗರೂಕತೆ ಮತ್ತು ಓವರ್ ಸ್ಪೀಡ್ ನಿಂದು ಪಲ್ಟಿ ಹೊಡೆದು (overturned) 8 ಜನರ ಸಾವು ಮತ್ತು 20 ಕ್ಕಿಂತ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆ ಸೇರುವುದಕ್ಕೆ ಕಾರಣವಾದ ಬಸ್ಸಲ್ಲಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಒಬ್ಬ ಮಗಳು (daughter) ಮೃತಪಟ್ಟಿದ್ದಾಳೆ ಮತ್ತು ಇನ್ನೊಬ್ಬಳ ಕಾಲು ಮುರಿದಿದೆ. ಗಾಯಗೊಂಡಿರುವವಳು ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತದ್ದಾಳೆ. ಮೃತಪಟ್ಟ ಮಗಳ ದೇಹವನ್ನು ಮರಣೋತ್ತರ (post-mortem) ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ ಮತ್ತು ಈ ತಾಯಿ ಶವಾಗಾರದ ಮುಂದೆ ಕೂತು ರೋದಿಸುತ್ತಿದ್ದಾಳೆ. ಪೋಸ್ಟ್-ಮಾರ್ಟಮ್ ಬಳಿಕ ದೇಹವನ್ನು ಆಕೆಗೆ ಒಪ್ಪಿಸಲಾಯಿತು.

ಒಬ್ಬ ಚಾಲಕನ ಅಜಾಗರೂಕತೆ ಮತ್ತು ರೆಕ್ಲೆಸ್ ಡ್ರೈವಿಂಗ್ ಎಂಥ ಅನಾಹುತಗಳನ್ನು ಸೃಷ್ಟಿಸುತ್ತದೆ ನೋಡಿ. ಅವನ ತಪ್ಪಿಗೆ ಈ ತಾಯಿ ತನ್ನ ಬದುಕಿನಿಡೀ ಕೊರಗಬೇಕು. ಆಕೆಗೆ ಮಾತಾಡುವುದು ಸಾಧ್ಯವಾಗುತ್ತಿಲ್ಲ. ಗಾಯಗೊಂಡಿರುವ ಮಗಳು ಚೇತರಿಸಿಕೊಳ್ಳಲು ಎಷ್ಟು ದಿನಗಳು ಬೇಕೋ? ಅಪಘಾತಕ್ಕೀಡಾಗಿರೋದು ಖಾಸಗಿ ಬಸ್ ಅಗಿದ್ದರೂ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ ಮತ್ತು ಗಾಯಗೊಂಡಿರುವವರ ಕುಟುಂಬಗಳಿಗೆ ರೂ. 50,000 ನೀಡಲಾಗುತ್ತಿದೆ.

ಇದಲ್ಲದೆ, ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಮೃತ ವ್ಯಕ್ತಿಯ ಕುಟುಂಬಳಿಗೆ ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂ. ನೀಡುವ ಘೋಷಣೆ ಮಾಡಿದ್ದಾರೆ. ಅವರ ಔದಾರ್ಯ ಮೆಚ್ಚುವಂಥದ್ದೇ.

ಇದನ್ನು ಓದಿ: ಬಸ್ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ಘೋಷಿಸಿದ ಬಿ ಶ್ರೀರಾಮುಲು