ಹಾಸನಾಂಬೆ ದೇಗುಲದಲ್ಲಿ ದರ್ಶನ ವ್ಯವಸ್ಥೆ ಸರಿಯಿಲ್ಲವೆಂದು ಮಹಿಳಾ ಭಕ್ತರ ಆಕ್ರೋಶ

ಅರುಣ್​ ಕುಮಾರ್​ ಬೆಳ್ಳಿ

Updated on: Oct 31, 2024 | 5:24 PM

ದೇವಸ್ಥಾನದ ಆವರಣದಲ್ಲಿ ಸೌಲಭ್ಯಗಳ ಕೊರತೆ ಎಂದು ಮಹಿಳೆಯರು ಹೇಳುತ್ತಾರೆ. ಕುಡಿಯಲು ನೀರಿಲ್ಲ, ಊಟ -ತಿಂಡಿಯ ವ್ಯವಸ್ಥೆ ಇಲ್ಲ ಮತ್ತು ಮಹಿಳೆಯರಿಗಾಗಿ ಶೌಚಾಲಯದ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಅವರು ಹೇಳುತ್ತಾರೆ. ದೇವಿಯ ದರ್ಶನಕ್ಕೆ ವಿಐಪಿ, ವಿವಿಐಪಿ ಪದ್ಧತಿಯನ್ನು ರದ್ದು ಮಾಡಬೇಕು, ದೇವಿಯ ಮುಂದೆ ಎಲ್ಲರೂ ಸಮಾನರು ಅಂತ ಭಕ್ತರೊಬ್ಬರು ಹೇಳುತ್ತಾರೆ.

ಹಾಸನ: ಭಕ್ತಾದಿಗಳಿಗೆ ಹಾಸನಾಂಬೆಯ ದರ್ಶನ ಮಾಡಿಕೊಳ್ಳಲು ನಿನ್ನೆಯವರೆಗೆ ಸಮಸ್ಯೆ ಇರಲಿಲ್ಲ. ಆದರೆ ದೀಪಾವಳಿ ಹಬ್ಬದ ಪ್ರಯುಕ್ತ ಇವತ್ತು ಭಕ್ತರ ಸಂಖ್ಯೆ ಜಾಸ್ತಿಯಿದ್ದ ಕಾರಣ ನೂಕುನುಗ್ಗಲು ಹೆಚ್ಚಾಗಿ ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಂತರೂ ಭಕ್ತರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಬಹಳಷ್ಟು ತೊಂದರೆಯಾಗಿದೆ. ಮಾಗಡಿಯಿಂದ ದೇವಿಯ ದರ್ಶನಕ್ಕೆ ಬಂದ ಮಹಿಳೆಯೊಬ್ಬರು ಕಣ್ಣೀರು ಹಾಕುತ್ತಾ ಇನ್ಯಾವತ್ತೂ ಹಾಸನಾಂಬೆಯ ದರ್ಶನಕ್ಕೆ ಬರಲ್ಲ ಎಂದಿದ್ದಾರೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹಾಸನಾಂಬೆ ದರ್ಶನ: ಭಕ್ತ ಸಾಗರ ನಿಯತ್ರಿಸಲು ಪರದಾಟ, ನೇರ ದರ್ಶನ ಟಿಕೆಟ್, ವಿಐಪಿ ಪಾಸ್, 500 ವಿಶೇಷ ಬಸ್ ರದ್ದು

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.