ಹಾಸನಾಂಬೆ ದರ್ಶನ: ಭಕ್ತ ಸಾಗರ ನಿಯತ್ರಿಸಲು ಪರದಾಟ, ನೇರ ದರ್ಶನ ಟಿಕೆಟ್, ವಿಐಪಿ ಪಾಸ್, 500 ವಿಶೇಷ ಬಸ್ ರದ್ದು

ಹಾಸನದ ಹಾಸನಾಂಬ ದೇಗುಲದಲ್ಲಿ ಭಕ್ತರ ದಟ್ಟಣೆಯಿಂದಾಗಿ 1000 ರೂಪಾಯಿ ನೇರ ದರ್ಶನ ಟಿಕೆಟ್ ಹಾಗೂ ವಿಐಪಿ ಪಾಸ್ ರದ್ದುಗೊಳಿಸಲಾಗಿದೆ. ಬೇಕಾಬಿಟ್ಟಿ ವಿವಿಐಪಿ ಪಾಸ್ ಹಂಚಿಕೆಯಿಂದಾಗಿ ಜನರನ್ನು ನಿಯಂತ್ರಿಸಲಾಗದ ಪರಿಸ್ಥಿತಿ ಉದ್ಭವಿಸಿದೆ. ಮತ್ತೊಂದೆಡೆ, ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಹಾಸನಾಂಬೆ ದರ್ಶನಕ್ಕೆಂದು ನಿಗದಿಪಡಿಸಿದ್ದ 500 ವಿಶೇಷ ಬಸ್​ಗಳ ಸಂಚಾರ ರದ್ದುಗೊಳಿಸಲಾಗಿದೆ.

ಹಾಸನಾಂಬೆ ದರ್ಶನ: ಭಕ್ತ ಸಾಗರ ನಿಯತ್ರಿಸಲು ಪರದಾಟ, ನೇರ ದರ್ಶನ ಟಿಕೆಟ್, ವಿಐಪಿ ಪಾಸ್, 500 ವಿಶೇಷ ಬಸ್ ರದ್ದು
ಹಾಸನಾಂಬೆ ದರ್ಶನ: ಭಕ್ತ ಸಾಗರ ನಿಯತ್ರಿಸಲು ಪರದಾಟ, ನೇರ ದರ್ಶನ ಟಿಕೆಟ್, ವಿಐಪಿ ಪಾಸ್, 500 ವಿಶೇಷ ಬಸ್ ರದ್ದು
Follow us
ಮಂಜುನಾಥ ಕೆಬಿ
| Updated By: Ganapathi Sharma

Updated on:Oct 31, 2024 | 2:43 PM

ಹಾಸನ, ಅಕ್ಟೋಬರ್ 31: ಹಾಸನದ ಹಾಸನಾಂಬ ದೇಗುಲದಲ್ಲಿ ದೇವಿಯ ದರ್ಶನಕ್ಕೆ ಇನ್ನು ಕೆಲವೇ ದಿನಗಳು ಅವಕಾಶವಿದ್ದು, ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ದೇಗುಲಕ್ಕೆ ಬರುತ್ತಿದ್ದಾರೆ. ಗುರುವಾರ ಸಹ ಭಾರೀ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ನಿಯಂತ್ರಣ ಮಾಡಲಾಗದೆ ಸಿಬ್ಬಂದಿ ಪರದಾಡುವಂತಾಯಿತು. ಹೀಗಾಗಿ 1000 ರೂ. ಮೊತ್ತ ನೇರ ದರ್ಶನದ ಟಿಕೆಟ್ ವಿತರಣೆ, ವಿಐಪಿ ಪಾಸ್ ರದ್ದುಗೊಳಿಸಲಾಗಿದೆ. ಜತೆಗೆ, ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್​ಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ.

500 ವಿಶೇಷ ಬಸ್​ಗಳ ಸಂಚಾರ ರದ್ದು

ಬೆಂಗಳೂರು ಸೇರಿ ವಿವಿಧೆಡೆಯಿಂದ ಹಾಸನಾಂಬೆ ದರ್ಶನಕ್ಕೆಂದು ಹೊರಡಲು ಅನುವಾಗಿದ್ದ 500 ವಿಶೇಷ ಬಸ್​ಗಳಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ‘ಟಿವಿ9’ಗೆ ತಿಳಿಸಿವೆ.

ನೇರ ದರ್ಶನ ಟಿಕೆಟ್ ರದ್ದು

ಜನರ ನಿಯಂತ್ರಣ ಸಾಧ್ಯವಾಗದೆ ಟಿಕೆಟ್ ವಿತರಣೆಯನ್ನೇ ರದ್ದು ಮಾಡಲಾಗಿದೆ. ಹೀಗಾಗಿ ವಿಶೇಷ ದರ್ಶನ ಸ್ಥಳದ ಮೂಲಕ ಭಕ್ತರು ಒಳ ಪ್ರವೇಶಿಸದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ.

Hasanaamba Temple Darshan: Heavy Crowds, VIP Pass Chaos Leads to special darshan Ticket and bus Cancellation

ಬೇರಿಕೇಡ್​​ಗಳನ್ನು ತಳ್ಳಿ ಒಳನುಗ್ಗಲು ಯತ್ನಿಸುತ್ತಿರುವ ಭಕ್ತಸಾಗರ

ಗುರುವಾರ ಬೆಳಗ್ಗೆಯಿಂದಲೇ ನಿರೀಕ್ಷೆಗೂ ಮೀರಿ ಭಕ್ತಸಾಗರವೇ ಹರಿದುಬರುತ್ತಿದೆ. ಜನರ ನಿಯಂತ್ರಕ್ಕೆ ಮೂವರು ಎಸ್​​ಪಿಗಳು ಪರದಾಡುವಂತಾಗಿದೆ. ಹಾಸನ ಎಸ್​​ಪಿ ಮಹಮ್ಮದ್ ಸುಜೀತಾ, ಕೊಡಗು ಎಸ್​ಪಿ ಹಾಗೂ ಮಂಡ್ಯ ಎಸ್​ಪಿಗಳು ಜನರ ನಿಯಂತ್ರಣಕ್ಕೆ ಪರದಾಡಿದ್ದಾರೆ.

ವಿಐಪಿ ಪಾಸ್ ರದ್ದು

ಹಾಸನದ ಹಾಸನಾಂಬೆ ದೇವಿ ದರ್ಶನದ ಎಲ್ಲ ವಿಐಪಿ ಪಾಸ್​ಗಳನ್ನು ಹಾಸನಾಂಬೆ ದೇಗುಲ ಆಡಳಿತ ಮಂಡಳಿ ರದ್ದುಗೊಳಿಸಿದೆ. ಈಗಾಗಲೇ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರನ್ನು ಹೊರತುಪಡಿಸಿ ಉಳಿದವರಿಗೆ ವಿಐಪಿ ಪಾಸ್ ಮೂಲಕ ಒಳಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

ಬೇಕಾಬಿಟ್ಟಿ ವಿವಿಐಪಿ ಪಾಸ್ ಹಂಚಿದ್ದರಿಂದ ಯಡವಟ್ಟು

ಬೇಕಾಬಿಟ್ಟಿಯಾಗಿ ವಿವಿಐಪಿ ಪಾಸ್ ಹಂಚಿದ್ದು ಕೂಡ ಯಡವಟ್ಟಿಗೆ ಕಾರಣವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಪಾಸ್ ಹಂಚಿಕೆ ಮಾಡಲಾಗಿದೆ. ವಿವಿಐಪಿ ಪಾಸ್ ಪಡೆದು ನೇರ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಬಂದಿದ್ದಾರೆ. ಹಾಸನಾಂಬೆ ದೇವಾಲಯ ಆಡಳಿತ ಮಂಡಳಿಯ ಅವೈಜ್ಞಾನಿಕ ನಡೆಯಿಂದ ಈಗ ಅಧಿಕಾರಿಗಳು, ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಟಿ ಕೋಟಿ ರೂಪಾಯಿ ಆದಾಯದ ಆಸೆಗೆ ಬಿದ್ದು ಬೇಕಾಬಿಟ್ಟಿ ಪಾಸ್ ಹಂಚಿಕೆ ಮಾಡಿದ್ದು ಮುಳುವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನಾಂಬ ದರ್ಶನಕ್ಕಾಗಿ ವಾಗ್ವಾದ

ವಿಐಪಿ ಪಾಸ್ ಹಾಗೂ ವಿಶೇಷ ದರ್ಶನ ಟಿಕೆಟ್ ಪಡೆದು ಬಂದಿರುವ ಲಕ್ಷಾಂತರ ಮಂದಿ, ‘ಪಾಸ್ ಇದೆ, ಒಳಗೆ ಬಿಡಿ’ ಎಂದು ಪೊಲೀಸರ ಜೊತೆ ವಾಗ್ವಾದ ಮಾಡುತ್ತಿದ್ದಾರೆ. ಇದರಿಂದಾಗಿ, ರೊಚ್ಚಿಗೆದ್ದ ಭಕ್ತರನ್ನು ನಿಯಂತ್ರಣ ಮಾಡುವುದು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.

ಬ್ಯಾರಿಕೇಡ್ ತಳ್ಳಿ ನುಗ್ಗಲು ಭಕ್ತರ ಯತ್ನ

ಭಕ್ತರದ ದಟ್ಟಣೆಯಿಂದಾಗಿ ಹಾಸನಾಂಬೆ ಸನ್ನಿಧಿಯಲ್ಲಿ ಪರಿಸ್ಥಿತಿ ಮಿತಿ ಮೀರುತ್ತಿದ್ದು, ಕಾದು ಕಾದು ಸುಸ್ತಾದ ಭಕ್ತರು ಬ್ಯಾರಿಕೇಡ್ ತಳ್ಳಿ ಒಳ ನುಗ್ಗಲು ಯತ್ನಿಸುತ್ತಿದ್ದಾರೆ. ಶಿಷ್ಟಾಚಾರದ ಹೆಸರಿನಲ್ಲಿ ಜಿಲ್ಲಾಡಳಿತದ ಅವ್ಯವಸ್ಥೆಗೆ ಜನರು ಹೈರಾಣಾಗಿದ್ದಾರೆ. ಆರೇಳು ಗಂಟೆ ಕಳೆದರೂ ದರ್ಶನ ಸಿಗದೆ ಜನರು ಕಂಗಾಲಾಗಿದ್ದು, ರೊಚ್ಚಿಗೆದ್ದಿದ್ದಾರೆ.

ಇದನ್ನೂ ಓದಿ: ಹಾಸನಾಂಬ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ: ವಿಡಿಯೋ ಇಲ್ಲಿದೆ

ರೊಚ್ಚಿಗೆದ್ದ ಜನರನ್ನು ನಿಯಂತ್ರಣ ಮಾಡಲು ಸಿಬ್ಬಂದಿ ಪಡಿಪಾಟಲು ಪಡುವಂತಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಬಂದಿರುವ ಸಾಮಾನ್ಯ ಜನರಿಗೆ ಗಣ್ಯರ ಹೆಸರಿನಲ್ಲಿ, ಶಿಷ್ಟಾಚಾರ ಪಾಲನೆ ನೆಪದಲ್ಲಿ ದರ್ಶನ ಸಿಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:37 pm, Thu, 31 October 24

ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್