Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬೆ ದರ್ಶನದ ಅವ್ಯವಸ್ಥೆ: ರೇವಣ್ಣ ಕೆಂಡಾಮಂಡಲ, ಡಿಸಿ ವಿರುದ್ಧ ತನಿಖೆಗೆ ಆಗ್ರಹ

ಶಕ್ತಿದೇವತೆ ಹಾಸನದ ಹಾಸನಾಂಬೆ ದೇವಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದ ಹಾಸನ ಜಿಲ್ಲಾಡಳಿತದ ವಿರುದ್ಧ ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. ಭಕ್ತರು 1000 ರೂ., 300 ರೂ. ಕೊಟ್ಟು ಪಾಸ್‌ ಗಳನ್ನು ಖರೀದಿಸಿದ್ದರೂ ಸಹ ದರ್ಶನಕ್ಕೆ ಗಂಟೆ ಗಟ್ಟಲೇ ಕಾಯಬೇಕಿದೆ. ಇದರಿಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ದರ್ಶನ ವಿಚಾರಕ್ಕೆ ಸರ್ಕಾರಿ ಇಲಾಖೆಯ ಸಿಬ್ಬಂದಿಗಳ ನಡುವೆ ಮಾರಾಮಾರಿಯಾಗಿದೆ. ಇನ್ನು ಈ ಬಗ್ಗೆ ಜೆಡಿಎಸ್ ಶಾಸಕ ಎಚ್​ಡಿ ರೇವಣ್ಣ ಸಹ ಕೆಂಡಾಮಂಡಲರಾಗಿದ್ದು, ಹಾಸನ ಜಿಲ್ಲಾಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಹಾಸನಾಂಬೆ ದರ್ಶನದ ಅವ್ಯವಸ್ಥೆ: ರೇವಣ್ಣ ಕೆಂಡಾಮಂಡಲ,  ಡಿಸಿ ವಿರುದ್ಧ ತನಿಖೆಗೆ ಆಗ್ರಹ
ಎಚ್​ಡಿ ರೇವಣ್ಣ
Follow us
ಮಂಜುನಾಥ ಕೆಬಿ
| Updated By: ರಮೇಶ್ ಬಿ. ಜವಳಗೇರಾ

Updated on: Oct 31, 2024 | 5:40 PM

ಹಾಸನ, (ಅಕ್ಟೋಬರ್ 31): ಜೆಡಿಎಸ್​ ಶಾಸಕ ಎಚ್​ಡಿ ರೇವಣ್ಣ ಅವರು ಇಂದು (ಅಕ್ಟೋಬರ್ 31) ಹಾಸನಾಂಬೆ ದರ್ಶನ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ವಿಶೇಷ ಪಾಸ್ ಅಂತ ಕೊಟ್ಟು ಶಾಸಕರ ಗೌರವವನ್ನು ಗಾಳಿಗೆ ತೂರಿದ್ದಾರೆ. ನಾನು ಟಿಕೆಟ್ ತೆಗೆದುಕೊಂಡು ಹೋಗಿ ಹಾಸನಾಂಬೆ ದರ್ಶನ ಮಾಡಿದೆ. ಹಾಸನಾಂಬೆ ಆಯಮ್ಮನದ್ದ, ಪಾಸ್ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಎಂದು ಹಾಸನ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕಿಡಿಕಾರಿದರು.

ನಾವ್ಯಾರು ಪಾಸ್ ಮಾಡಿಸಿ ಎಂದಿರಲಿಲ್ಲ, ಯಾರನ್ನ ಕೇಳಿ ಮಾಡಿಸಿದ್ರಿ/ ಡಿಸಿ ಕಚೇರಿ ಸಿಬ್ಬಂದಿ ಶಶಿಯನ್ನು ನೂಕಿದರೆಂದು ಪೊಲೀಸ್ ಅಧಿಕಾರಿಗಳ ಮೇಲೆ ಡಿಸಿ ಸತ್ಯಭಾಮ ಹರಿಹಾಯ್ದಿದ್ದರು. 2 ದಿನ ಜೀಪ್ ಇಟ್ಕೊಂಡು ಜನ ಕರೆದುಕೊಂಡು ಬರಲು ಶಶಿ ಯಾರು? ಹಾಸನಾಂಬೆ ನನ್ನದು, ನನ್ನ ಕೇಳದೆ ಯಾರನ್ನು ಬಿಡಬಾರದು ಅಂತಾರೆ. ಹಾಸನಾಂಬೆ ಜಿಲ್ಲಾಧಿಕಾರಿಗಳ ಆಸ್ತಿ ಎಂದು ವೈರಲ್ ಆಗಿದೆ. ನನ್ನ ಅಪ್ಪಣೆ ಇಲ್ಲದೆ ರಾಜಕೀಯದವರನ್ನು ಬಿಡಬಾರದೆನ್ನುವ ಭಾವನೆ. ಕಂದಾಯ ಇಲಾಖೆಯ ಮುಸ್ಲಿಂ ಅಧಿಕಾರಿಯನ್ನು ನೂಕಿ ಹೊಡೀತಾರೆ. ಹಾಸನ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಯಾವ ರೀತಿಯ ರಕ್ಷಣೆ ಇದೆ ಎಂದು ಹರಿಹಾಯ್ದರು.

ಇದನ್ನೂ ಓದಿ: ಹಾಸನಾಂಬೆ ದರ್ಶನ: ಭಕ್ತ ಸಾಗರ ನಿಯತ್ರಿಸಲು ಪರದಾಟ, ನೇರ ದರ್ಶನ ಟಿಕೆಟ್, ವಿಐಪಿ ಪಾಸ್, 500 ವಿಶೇಷ ಬಸ್ ರದ್ದು

ನಮ್ಮ ತೋಟದ ಹುಡುಗರು ಪಾಸ್ ಪಡೆದು ಬಂದು 6 ಗಂಟೆ ಕಾದಿದ್ದಾರೆ. ASPಗೆ ಫೋನ್ ಕೊಡು ಎಂದರೆ ಅವರು ಪಡೆಯಲಿಲ್ಲ. ಹಾಸನದಲ್ಲಿ ಒಂದು ಕಡೆ ಎಸ್​ಪಿ, ಮತ್ತೊಂದು ಕಡೆ ಡಿಸಿ ಇದ್ದಾರೆ. ಶಾಸಕ ಹುಲ್ಲಹಳ್ಳಿ ಸುರೇಶ್ ಸೇರಿದಂತೆ ಯಾರಿಗೂ ಬೆಲೆಯೇ ಇಲ್ಲ. ಪೊಲೀಸರೇ 2 ಜೀಪ್​ನಲ್ಲಿ ಜನರನ್ನು ಕರೆದುಕೊಂಡು ಬರುತ್ತಿದ್ದಾರೆ. ಡಿಸಿ 4 ಜೀಪ್​ನಲ್ಲಿ ಐಬಿಯಿಂದ ಜನರನ್ನು ಕರೆದುಕೊಂಡು ಬರುತ್ತಿದ್ದಾರೆ. ಸಿಎಸ್​ಗೆ ಹೇಳಿ ಅಮಾನತುಮಾಡಿಸುವುದಾಗಿ ಪೊಲೀಸರಿಗೆ ಡಿಸಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಧಮ್ ಇದ್ದರೆ ತನಿಖೆ ಮಾಡಿಸಿ. ಹಾಸನ ಡಿಸಿ ಮಾಡಿರುವ ಅವ್ಯವಸ್ಥೆ ಬಗ್ಗೆ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.

ವಿಶೇಷ ಪಾಸ್ ಅಂತ ಕೊಟ್ಟು ಶಾಸಕರ ಗೌರವವನ್ನು ಗಾಳಿಗೆ ತೂರಿದ್ದಾರೆ. ನಾನು ಟಿಕೆಟ್ ತೆಗೆದುಕೊಂಡು ಹೋಗಿ ಹಾಸನಾಂಬೆ ದರ್ಶನ ಮಾಡಿದೆ. ಹಾಸನಾಂಬೆ ಆಯಮ್ಮನದ್ದ, ಪಾಸ್ ಮಾಡಲು ಅಧಿಕಾರ ಕೊಟ್ಟವರು ಯಾರು? ನಾವೆಲ್ಲ ಹೆದರಿ ಓಡಿ ಹೋಗುತ್ತೇವೆಂದು ಈ‌ ಡಿಸಿ ತಿಳಿದುಕೊಂಡಿದ್ದಾರೆ. ನನ್ನ ಜೀವನದಲ್ಲಿ ಇಂತಹ ಡಿಸಿಗಳನ್ನು ಎಷ್ಟು ಜನ ನೋಡಿದ್ದೀನಿ. ನಂದು ದೇವಸ್ಥಾನ ಅಪ್ಪಣೆ ಇಲ್ಲದೆ ಬರಂಗಿಲ್ಲ ಎಂದರೆ ನಾನೇಕೆ‌ ಬರಲಿ. ಅದಕ್ಕೆ ಟಿಕೆಟ್ ತಗೊಂಡು ಬಂದಿದ್ದೀನಿ ಎಂದರು.

ನಾನು ಶಾಸಕ, ಮಾಜಿಸಚಿವ ಎಂದು ಬಂದಿಲ್ಲ, ಭಕ್ತನಾಗಿ ಹಾಸನಾಂಬೆ ತಾಯಿ ಪೂಜೆಗಾಗಿ ಬಂದಿದ್ದೀನಿ. ಈ‌ ಜಿಲ್ಲೆಯಲ್ಲಿ ನಡೆಸುತ್ತಿರುವುದರ ಬಗ್ಗೆ ಸಮಗ್ರವಾಗಿ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತೇನೆ. ಅವರಿಗೆ ತಾಕತ್ ಇದ್ದರೆ ಮುಖ್ಯ ಕಾರ್ಯದರ್ಶಿಗಳು ತನಿಖೆಗೆ ಆರ್ಡರ್ ಮಾಡುತ್ತಾರೆ. ಇಲ್ಲವಾದಲ್ಲಿ ಈ ಡಿಸಿಗೆ ಸೆರೆಂಡರ್ ಆಗವ್ರೆ ಅಂಥ ಚಾಲೆಂಜ್ ಮಾಡ್ತೀನಿ ಎಂದು ಹೇಳಿದರು.

ಮುಖ್ಯಕಾರ್ಯದರ್ಶಿಗಳು ಈ ಜಿಲ್ಲೆಯೊಳಗೆ ಇಂತಹ ಡಿಸಿ ಇಟ್ಟುಕೊಂಡಿದ್ದಾರೆ. ದೇವೇಗೌಡರು ನಲವತ್ತು ರಾಜಕಾರಣ ಮಾಡಿರುವ ಜಿಲ್ಲೆ. ನನ್ನದು, ನನ್ನತ್ವ ಎನ್ನುವ ಭಾವನೆಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ. ಹೇಳೋರೋ, ಕೇಳೋರು ಯಾರು ಇಲ್ಲ ಈ ಜಿಲ್ಲೆಯಲ್ಲಿ. ಎರಡುವರೆ ಲಕ್ಷ ಪಾಸ್ ಯಾಕೆ ಕೊಟ್ರಿ. ಸ್ಥಳೀಯ ಎಂಎಲ್‌ಎಗೆ ಕೇಳಿದ್ದೀರಾ. ಎಂಎಲ್‌ಎಗಳು ಎರಡೆರಡು ಕಿಲೋಮೀಟರ್ ನಡೆಯಬೇಕು ಎಂದು ವಾಗ್ದಾಳಿ ನಡೆಸಿದರು.

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್