ದೇವಸ್ಥಾನ ನಿರ್ಮಾಣಕ್ಕೆ ಗೃಹಲಕ್ಷ್ಮೀ ಹಣ ದೇಣಿಗೆ ನೀಡಿದ ಮಹಿಳೆಯರು

| Updated By: ವಿವೇಕ ಬಿರಾದಾರ

Updated on: Sep 06, 2024 | 8:26 AM

ಇತ್ತೀಚಿಗೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಗೃಹಲಕ್ಷ್ಮೀ ಹಣದಿಂದ ಅತ್ತೆ-ಸೊಸೆ ಫ್ಯಾನ್ಸಿ ಸ್ಟೋರ್​​ ತೆಗೆದಿದ್ದರು. ಇದೀಗ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಹಿರೇಬಿಡನಾಳ ಗ್ರಾಮದ ಮಹಿಳೆಯರು ದೇವಸ್ಥಾನ ನಿರ್ಮಾಣಕ್ಕೆ ಗೃಹಲಕ್ಷ್ಮೀ ಹಣ ದೇಣಿಗೆ ನೀಡಿದ್ದಾರೆ.

ಕೊಪ್ಪಳ, ಸೆಪ್ಟೆಂಬರ್​ 06: ಕರ್ನಾಟಕ ಸರ್ಕಾರದ ಮಹತ್ವದ ಗೃಹಲಕ್ಷ್ಮೀ (Gruha Laxmi) ಯೋಜನೆ ಜಾರಿಯಾಗಿ ವರ್ಷ ಕಳೆದಿದೆ. ಕುಕನೂರು (Kuknoor) ತಾಲೂಕಿನ ಹಿರೇಬಿಡನಾಳ ಗ್ರಾಮದ ಮಹಿಳೆಯರು ದೇವಸ್ಥಾನ ನಿರ್ಮಾಣಕ್ಕೆ ‘ಗೃಹಲಕ್ಷ್ಮೀ’ ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಹಿರೇಬಿಡನಾಳ ಗ್ರಾಮದಲ್ಲಿ ಶರಣಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಒಂದು ತಿಂಗಳ ಎರಡು ಸಾವಿರ ಹಣ ನೀಡಿದ್ದಾರೆ. 50ಕ್ಕೂ ಹೆಚ್ಚು ಮಹಿಳೆಯರು ‘ಗೃಹಲಕ್ಷ್ಮೀ’ ಹಣ ನೀಡಿದ್ದಾರೆ.

ಮೂರು ತಿಂಗಳ ಪೈಕಿ ಒಂದು ತಿಂಗಳ ಹಣ 15 ದಿನದ ಹಿಂದೆ ಬಂದಿದೆ. ಅದೇ ಹಣ ಡ್ರಾ ಮಾಡಿಕೊಂಡು ದೇವಸ್ಥಾನ ನಿರ್ಮಾಣಕ್ಕೆ ನೀಡಿದ್ದೇವೆ. ಯಾರ ಒತ್ತಡವಿಲ್ಲದೆ ಹಣ ನೀಡುತ್ತಿದ್ದೇವೆ. ಎಂದು ಮಹಿಳೆಯರು ಹೇಳಿದರು. ಈ ವಿಚಾರ ತಿಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿರೇಬಿಡನಾಳ ಮಹಿಳೆಯರಿಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಮಹಿಳೆಯರಿಗೆ ಸತ್ಕಾರ ಮಾಡಿಸಿದರು.

ಇದನ್ನೂ ಓದಿ: ಹಾವೇರಿ: ಗೃಹಲಕ್ಷ್ಮೀ ಯೋಜನೆ ಹಣ ಕೂಡಿಟ್ಟು ಫ್ರಿಜ್ ಖರೀದಿಸಿದ ಮಹಿಳೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ