ಮೈಸೂರು ದಸರಾ: ರಾಜಬೀದಿಗಳಲ್ಲಿ ದಸರಾ ಗಜಪಡೆ ಜಂಬೂ ಸವಾರಿ ತಾಲೀಮು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದ್ದು, ಗಜಪಡೆಯ ತಾಲೀಮು ಭರ್ಜರಿಯಾಗಿಯೇ ನಡೆಯುತ್ತಿದೆ. ಇಂದು ಎರಡನೇ ಹಂತದ ದಸರಾ ಗಜಪಡೆಯ ತೂಕ ಪರೀಕ್ಷೆ ನಡೆಯಲಿದ್ದು, ಈ ಮಧ್ಯೆ ಮೈಸೂರಿನಲ್ಲಿ ರಸ್ತೆಗಳಲ್ಲಿ ಗಜಪಡೆ ಜಂಬೂ ಸವಾರಿ ತಾಲೀಮು ನಡೆಸಿದೆ. ವಿಡಿಯೋ ಇಲ್ಲಿದೆ ನೋಡಿ.
ಮೈಸೂರು, ಸೆಪ್ಟೆಂಬರ್ 6: ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರಿನಲ್ಲಿ ಭರ್ಜರಿಯಾಗಿಯೇ ಸಿದ್ಧತೆಗಳು ನಡೆಯುತ್ತಿವೆ. ಇಂದು ಎರಡನೇ ಹಂತದ ದಸರಾ ಗಜಪಡೆಯ ತೂಕ ಪರೀಕ್ಷೆ ನಡೆಯಲಿದೆ. ಎರಡನೇ ಹಂತದ ದಸರಾ ಗಜಪಡೆ ಗುರುವಾರ ಸಂಜೆ ಮೈಸೂರಿಗೆ ಆಗಮಿಸಿತ್ತು. ಈ ಪೈಕಿ ಪ್ರಶಾಂತ್ ಆನೆ 4875 ಕೆಜಿ, ಹಿರಣ್ಯ 2930 ಕೆಜಿ, ಮಹೇಂದ್ರ 4910 ಕೆಜಿ, ದೊಡ್ಡಹರವೆ ಲಕ್ಷ್ಮಿ 3485 ಕೆಜಿ, ಸುಗ್ರೀವ ಆನೆ 5190 ಕೆಜಿ ತೂಕ ಇವೆ.
ಮೈಸೂರಿನ ದೇವರಾಜ ಮೊಹಲ್ಲಾದ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರೀಕ್ಷೆ ನಡೆಯಲಿದೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಬಳಿಕ ಅತಿ ಹೆಚ್ಚು ತೂಕ ಹೊಂದಿರುವ ಆನೆ ಸುಗ್ರೀವ ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos