ಕುಮಾರಸ್ವಾಮಿ ಅಡುವ ಮಾತುಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ: ಜಿ ಪರಮೇಶ್ವರ್, ಗೃಹ ಸಚಿವ

|

Updated on: Aug 22, 2024 | 12:40 PM

ಮುಖ್ಯಮಂತ್ರಿಯವರು ದೆಹಲಿಗೆ ಹೋಗುತ್ತಿದ್ದಾರೆಯೇ ಎಂದು ನಿನ್ನೆ ಪತ್ರಕರ್ತರು ಕೇಳಿದಾಗ ಪರಮೇಶ್ವರ್ ಹೌದು ಹೋಗುತ್ತಿದ್ದಾರೆ ಎಂದಿದ್ದರು, ಅದರೆ ಇವತ್ತು ಕೇಳಿದಾಗ ತನಗೆ ಗೊತ್ತಿಲ್ಲ ಎಂದರು! ನೀವೂ ಹೋಗ್ತೀರಾ ಅಂದಾಗ, ಹೈಕಮಾಂಡ್ ಕರೆದಿಲ್ಲ, ಅದರೆ ಮುಖ್ಯಮಂತ್ರಿ ಕರೆದರೆ ಹೋಗುತ್ತೇನೆ ಎಂದು ಸಚಿವ ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಸಂಪುಟ ಸಭೆಯಲ್ಲಿ ಭಾಗವಹಿಸುವ ಮೊದಲು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರಗಳಲ್ಲಿ ತಿದ್ದುಪಡಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ರಕ್ಷಿಸುವ ಪ್ರಮೇಯ ಉದ್ಭವಿಸಲ್ಲ, ಅವರು ಸೇಫ್ ಇಲ್ಲ ಯಾರು ಹೇಳೋದು? ಎಲ್ಲರಂತೆ ಸೇಫ್ಅವರು ಆಗಿದ್ದಾರೆ ಎಂದರು. ಸಚಿವ ಸಂಪುಟ ಸಭೆಯಲ್ಲಿ ಎಲ್ಲರೂ ಮುಖ್ಯಮಂತ್ರಿ ಜೊತೆ ಇರುವ ನಿರ್ಣಯ ತೆಗೆದುಕೊಳ್ಳಲಾಗಿದೆ, ಮತ್ತು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲೂ ಅವರೊಂದಿಗೆ ಐಕ್ಯತೆ ಪ್ರದರ್ಶಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು. ಇವತ್ತಿನ ಸಂಪುಟ ಸಭೆಯಲ್ಲ ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಅಂತ ತನಗೆ ಗೊತ್ತಿಲ್ಲ, ಮೀಟಿಂಗ್ ನಂತರ ಮೀಡಿಯ ಬ್ರೀಫಿಂಗ್ ಮಾಡಲಾಗುತ್ತದೆ ಎಂದು ಸಚಿವ ಹೇಳಿದರು. ನೂರು ಸಿದ್ದರಾಮಯ್ಯ ಬಂದರೂ ತನ್ನನ್ನು ಬಂಧಿಸಲಾಗಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿರುವುದನ್ನು ತಿಳಿಸಿದಾಗ ಪರಮೇಶ್ವರ್, ಅಂಥ ವಿಷಯಗಳಿಗೆಲ್ಲ ತಾನು ಉತ್ತರಿಸುವುದಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯ ವಿರುದ್ಧ ತನಿಖೆ ಆದೇಶ ಕೋರ್ಟ್ ಎತ್ತಿಹಿಡಿದರೂ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ: ಪರಮೇಶ್ವರ್