ಮುಗುಳ್ನಗುತ್ತಾ, ಶಿಳ್ಳೆ ಹಾಕುತ್ತಾ ಕ್ಯಾಬಿನೆಟ್ ಮೀಟಿಂಗ್ ಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಸಾಯಂಕಾಲ ಅಥವಾ ನಾಳೆ ದೆಹಲಿಗೆ ಹೋಗಲಿದ್ದಾರೆ ಮತ್ತು ಮುಡಾ ಪ್ರಕರಣ ಸಂಬಂಧಿಸಿದ ಎಲ್ಲ ಬೆಳವಣಿಗೆಗಳನ್ನು ಪಕ್ಷದ ವರಿಷ್ಠರಿಗೆ ವಿವರಿಸಲಿದ್ದಾರೆ. ಪ್ರಕರಣ ವಿಚಾರಣೆಯನ್ನು ಆಗಸ್ಟ 29ರವರೆಗೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್ ಗೆ ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೇ ಗೆಲುವಾಗಿದ್ದಾರೆ, ಖುಷಿಯಿಂದ ಓಡಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಅವರ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬಳಿಕ ಸಿಎಂ ತಳಮಳಗೊಂಡಿದ್ದು ಸುಳ್ಳಲ್ಲ. ಅದರೆ ರಾಜ್ಯಪಾಲರು ನೀಡಿದ ಅನುಮತಿಯನ್ನು ಹೈಕೋರ್ಟ್ ನಲ್ಲ್ಲಿ ಚಾಲೆಂಜ್ ಮಾಡಿದ ನಂತರ ಸಿಎಂ ನಿರಾಳರಾಗಿದ್ದಾರೆ. ಇಲ್ನೋಡಿ, ಇಂದಿನ ಕ್ಯಾಬಿನೆಟ್ ಮೀಟಿಂಗ್ ಅವರು ಬರುತ್ತಿರುವ ಶೈಲಿ ಗಮನಿಸಿ. ಅದೇ ಮೊದಲಿನ ಗತ್ತು ಮತ್ತು ಬಾಯಲ್ಲಿ ಶಿಳ್ಳೆ! ಅಲ್ಲಿ ನೆರೆದಿರುವ ಮಾಧ್ಯಮ ಮತ್ತು ಜನಕ್ಕೆ ಅವರು ಮುಗುಳ್ನಗುತ್ತಾ ಕೈಯೆತ್ತಿ ವಿಶ್ ಮಾಡುತ್ತಾರೆ. ಮುಖದ ಮೇಲೆ ಮಾಸದ ನಗು. ತಮ್ಮ ಎಡಗೈಯನ್ನು ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಹೆಗಲ ಮೇಲೆ ಹಾಕಿ ವಿಧಾನ ಸೌಧದೊಳಗೆ ನಡೆದುಹೋಗುತ್ತಾರೆ. ಗಮನಿಸಿಬೇಕಾದ ಅಂಶವೆಂದರೆ, ಮುಡಾ ಪ್ರಕರಣದಲ್ಲಿ ಕೋರ್ಟ್ ತನಿಖೆಗೆ ಆದೇಶ ನೀಡಿದರೂ ಸಚಿವ ಸಂಪುಟ, ಶಾಸಕರು ಮತ್ತು ಪಕ್ಷದ ಹೈಕಮಾಂಡ್ ಅವರ ಜೊತೆ ನಿಲ್ಲುವುದಾಗಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ: ಪತ್ನಿ ಪತ್ರ ಬರೆದಿದ್ದು ಗೊತ್ತಿದ್ದೂ ಗೊತ್ತಿಲ್ಲವೆಂದು ರಾಜ್ಯಪಾಲರಿಗೆ ಉತ್ತರಿಸಿದ ಸಿದ್ದರಾಮಯ್ಯ