AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ: ಪತ್ನಿ ಪತ್ರ ಬರೆದಿದ್ದು ಗೊತ್ತಿದ್ದೂ ಗೊತ್ತಿಲ್ಲವೆಂದು ರಾಜ್ಯಪಾಲರಿಗೆ ಉತ್ತರಿಸಿದ ಸಿದ್ದರಾಮಯ್ಯ

ರಾಜ್ಯಪಾಲರು ಕೊಟ್ಟಿರುವ ಶೋಕಾಸ್ ನೋಟಿಸ್​ಗೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ನನ್ನ ಪತ್ನಿ ಮುಡಾಗೆ ಯಾವ ಪತ್ರವನ್ನೂ ಬರೆದಿಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. 23-06-2014ರಲ್ಲಿ ಮುಡಾಗೆ ಸಿಎಂ ಪತ್ನಿ ಪಾರ್ವತಿ 3.16 ಗುಂಟೆ ಜಮೀನಿಗೆ ಬದಲಿ ಜಾಗ‌ ಕೇಳಿ ಬರೆದಿರುವ ಅರ್ಜಿಯ ಸಂಪೂರ್ಣ ಮಾಹಿತಿಯ ಬಗ್ಗೆ ಸಿಎಂಗೆ ಗೊತ್ತಿದ್ರೂ, ನನ್ನ ಪತ್ನಿ ಪತ್ರ ಬರೆದಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಮುಡಾ ಹಗರಣ: ಪತ್ನಿ ಪತ್ರ ಬರೆದಿದ್ದು ಗೊತ್ತಿದ್ದೂ ಗೊತ್ತಿಲ್ಲವೆಂದು ರಾಜ್ಯಪಾಲರಿಗೆ ಉತ್ತರಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ
ದಿಲೀಪ್​, ಚೌಡಹಳ್ಳಿ
| Updated By: ಆಯೇಷಾ ಬಾನು|

Updated on: Aug 22, 2024 | 1:16 PM

Share

ಮೈಸೂರು, ಆಗಸ್ಟ್​.22: ಮುಡಾ ಅಕ್ರಮ (MUDA Scam) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಒಂದಿಲ್ಲಾವೊಂದು ಸಂಕಷ್ಟಗಳು ಎದುರಾಗುತ್ತಿವೆ. ರಾಜ್ಯಪಾಲರು ಕೊಟ್ಟಿರುವ ಶೋಕಾಸ್ ನೋಟಿಸ್​ಗೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ನನ್ನ ಪತ್ನಿ ಮುಡಾಗೆ ಯಾವ ಪತ್ರವನ್ನೂ ಬರೆದಿಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಪತ್ನಿ ಬರೆದಿರುವ ಅರ್ಜಿಯ ಸಂಪೂರ್ಣ ಮಾಹಿತಿ ಗೊತ್ತಿದ್ದರೂ ನನ್ನ ಪತ್ನಿ ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿದ್ದರಾಮಯ್ಯನವರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದರು. ಈ ನೋಟಿಸ್‌ಗೆ ಉತ್ತರಿಸಿದ ಸಿದ್ದರಾಮಯ್ಯನವರು, ತಮ್ಮ ಪತ್ನಿ ಪಾರ್ವತಿ ಅವರು ಮುಡಾಗೆ ಬರೆದ ಪತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ. 30ನೇ ಖಂಡಿಕೆ 15ನೇ ಅನೆಕ್ಸರ್ ನಲ್ಲಿ ತಮ್ಮ ಪತ್ನಿ ಮುಡಾಗೆ ಪತ್ರ ಬರೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

23-06-2014ರಲ್ಲಿ ಮುಡಾಗೆ ಸಿಎಂ ಪತ್ನಿ ಪಾರ್ವತಿ 3.16 ಗುಂಟೆ ಜಮೀನಿಗೆ ಬದಲಿ ಜಾಗ‌ ಕೇಳಿ ಬರೆದಿರುವ ಅರ್ಜಿಯ ಸಂಪೂರ್ಣ ಮಾಹಿತಿಯ ಬಗ್ಗೆ ಸಿಎಂಗೆ ಗೊತ್ತಿದ್ರೂ, ನನ್ನ ಪತ್ನಿ ಪತ್ರ ಬರೆದಿಲ್ಲ ಎಂದು ಉಲ್ಲೇಖಿಸಿದ್ದಾರೆ. ನನ್ನ ಪತ್ನಿ ಮುಡಾಗೆ ಯಾವ ಪತ್ರವನ್ನ ಬರೆದಿಲ್ಲ ಎಂದು ತಿಳಿಸಿದ್ದು ಸಿಎಂಗೆ ಸಂಕಷ್ಟ ಕಾದಿದ್ಯಾ ಎನ್ನಲಾಗುತ್ತಿದೆ. ಪತ್ನಿ ಮುಡಾಗೆ ಬರೆದ ಪತ್ರದ ಬಗ್ಗೆ ಗೊತ್ತಿಲ್ಲ ಎಂದು ಸಿಎಂ ಸುಳ್ಳು ಹೇಳಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ರಿಟ್ ಅರ್ಜಿಯಲ್ಲಿ ಕೋರ್ಟ್​ ಕಣ್ತಪ್ಪಿಸಿದ್ದಾರೆ ಸಿದ್ದರಾಮಯ್ಯ: ದೂರದಾರ ಸ್ನೇಹಮಹಿ ಕೃಷ್ಣ ಗಂಭೀರ ಆರೋಪ

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದಿರುವುದು ಸಿದ್ದರಾಮಯ್ಯಗೆ ಮೊದಲೇ ಗೊತ್ತಿತ್ತು. ಸಿದ್ದರಾಮಯ್ಯ ಒಟ್ಟು 713 ಪುಟಗಳ ದಾಖಲೆ ಒಳಗೊಂಡ ರಿಟ್ ಅರ್ಜಿಯನ್ನು ಕೋರ್ಟ್‌ಗೆ ಹಾಕಿದ್ದಾರೆ. 531ನೇ ಪುಟವಾಗಿ ಪಾರ್ವತಿ ಬರೆದ ಅರ್ಜಿಯ ಮೊದಲ ಪುಟ ಇದೆ. ಆದರೆ‌ 532ನೇ ಪುಟದಲ್ಲಿ ಪಾರ್ವತಿ ಅವರು ಬರೆದ ಎರಡನೇ ಪುಟ ಇಲ್ಲ. ಅದರಲ್ಲೂ ಎರಡನೇ ಪುಟದಲ್ಲಿ ಸಾಕ್ಷ್ಯ ನಾಶ ಎನ್ನುವ ರೀತಿಯಲ್ಲಿ ವೈಟ್ನರ್‌ ಹಾಕಿ ಅಳಿಸುವ ಪ್ರಯತ್ನ ಮಾಡಲಾಗಿದೆ. 532ನೇ ಪುಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಡಾವಳಿ ಪತ್ರ ಇದೆ. ವೈಟ್ನರ್‌ ಹಾಕಿದ ಕಾರಣಕ್ಕಾಗಿ ಎರಡನೇ ಪುಟ ಬಿಟ್ಟು ಕೇವಲ ಒಂದು ಪುಟ ಮಾತ್ರ ಕೋರ್ಟ್‌ಗೆ ಕೊಟ್ಟಿದ್ದಾರೆ ಎಂದು ಸ್ನೇಹಮಯಿ ಅವರು ಆರೋಪಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ