ಜೀವಬೆದರಿಕೆ ಇದ್ದರೂ ಹೋರಾಟ ನಿಲ್ಲಿಸಲ್ಲ ಎನ್ನುತ್ತಾ ಗದ್ಗದಿತರಾಗುವ ಸಾಮಾಜಿಕ ಕಾರ್ಯಕರ್ತ ಗಂಗರಾಜು
ರವಿವಾರದ ಘಟನೆಯಿಂದ ಗಂಗರಾಜು ಕೊಂಚ ವಿಚಲಿತರಾಗಿದ್ದಾರೆಯೇ ಹೊರತು ಎದೆಗುಂದಿಲ್ಲ. ತನ್ನ ಮೇಲೆ ಹಲ್ಲೆ ನಡೆದರೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳುವ ಅವರು ಸರ್ಕಾರದಿಂದ ಗನ್ ಮ್ಯಾನ್ ಒದಗಿಸಬೇಕೆಂದು ಮನವಿ ಮಾಡಿದ್ದಾರೆ, ಅದರೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿಲ್ಲ. ನಿಮ್ಮ ದುಡ್ಡಲ್ಲಿ ಗನ್ ಮ್ಯಾನ್ ಇಟ್ಟುಕೊಳ್ಳಿ ಎಂದು ಪೊಲೀಸ್ ಇಲಾಖೆ ಹೇಳಿದೆಯಂತೆ.
ಮೈಸೂರು: ಮುಡಾ ಪ್ರಕರಣವನ್ನು ಬಯಲಿಗೆಳೆದು ಸರ್ಕಾರದ ಪಾಲಿಗೆ ಕುತ್ತಿಗೆಯ ಮುಳ್ಳಾಗಿರುವ ಸಾಮಾಜಿಕ ಕಾರ್ಯಕರ್ತ ಗಂಗರಾಜು ಅವರಿಗೆ ಜೀವಭಯವಿದೆ. ರವಿವಾರದಂದು ಅವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ತುಮಕೂರುನಿಂದ ಮೈಸೂರಿಗೆ ವಾಪಸ್ಸು ಬರುವಾಗ ಎರಡು ಬಾರಿ ದ್ವಿಚಕ್ರವಾಹನಗಳ ಸವಾರರಿಂದ ಹಲ್ಲೆ ನಡೆಸುವ ಪ್ರಯತ್ನ ನಡೆದಿದೆ. ಸಮಾಜದಲ್ಲಿ ಭ್ರಷ್ಟರಿಗೆ ರಕ್ಷಣೆ ಇದೆ ಅದರೆ ಸಮಾಜ ಒಳಿತಿಗಾಗಿ ಹೋರಾಡುತ್ತಿರುವ ತನಗೆ ರಕ್ಷಣೆ ಇಲ್ಲ ಎಂದು ಗದ್ಗರಿತರಾಗಿ ಅವರು ನಮ್ಮ ಮೈಸೂರು ವರದಿಗಾರನಿಗೆ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರೂಪಾ ಅವರ ಫೋಟೋ ಸಹ ನನ್ನಲ್ಲಿದೆ, ಮಹಿಳೆಯರ ಚಾರಿತ್ರ್ಯವಧೆ ನನ್ನಿಂದಾಗದ ಕೆಲಸ: ಗಂಗರಾಜು, ಸಾಮಾಜಿಕ ಕಾರ್ಯಕರ್ತ