ಪಕ್ಷ ಯಾರದು ಅಂತ ಕಾರ್ಯಕರ್ತರು ತೀರ್ಮಾನಿಸುತ್ತಾರೆ, ಇಬ್ರಾಹಿಂ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ: ಹೆಚ್ ಡಿ ಕುಮಾರಸ್ವಾಮಿ

|

Updated on: Oct 17, 2023 | 10:51 AM

ದಯವಿಟ್ಟು ಬಾಲಿಶ ಪ್ರಶ್ನೆಗಳನ್ನು ಕೇಳಬೇಡಿ, ಪಕ್ಷ ಯಾರದ್ದು ಅಂತ ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ, ಅವರು ಉಚ್ಚಾಟನೆಯಾದರೂ ಮಾಡಿಕೊಳ್ಳಲಿ ಮತ್ತೇನಾದರೂ ಮಾಡಿಕೊಳ್ಳಲಿ, ಅವರ ಮಾತುಗಳನ್ನು ನಾವೇ ಗಂಭೀರವಾಗಿ ತೆಗೆದುಕೊಂಡಿಲ್ಲ, ನೀವ್ಯಾಕೆ ತಲೆ ಕೆಡಿಸಿಕೊಂಡಿದ್ದೀರಿ ಅಂತ ಕುಮಾರಸ್ವಾಮಿ ಹೇಳುತ್ತಾರೆ.

ಬೆಂಗಳೂರು: ನಿನ್ನೆ ಜೆಡಿಎಸ್ ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ನೀಡಿದ ಹೇಳಿಕೆಗಳಿಂದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಭಾರೀ ಡಿಸ್ಟರ್ಬ್ಡ್ ಆಗಿದ್ದಾರೆ. ಸಾಮಾನ್ಯವಾಗಿ ಮಾಧ್ಯಮ ಪ್ರತಿನಿಧಿಗಳೊಡನೆ ವ್ಯವಧಾನದೊಂದಿಗೆ ಮಾತಾಡುವ ಕುಮಾರಸ್ವಾಮಿ ಇವತ್ತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅಸಹನೆಯಿಂದ, ಬೇಕಾಬಿಟ್ಟಿಯಾಗಿ ಉತ್ತರಿಸಿದರು. ಜೆಡಿಎಸ್ ಇಬ್ರಾಹಿಂಗೆ ಸೇರಿದ ಪಕ್ಷ, ನಿಮ್ಮನ್ನೇ ಅವರು ಪಕ್ಷದಿಂದ ಉಚ್ಚಾಟಿಸುತ್ತಾರಂತೆ (expel) ಅಂತ ಕೇಳಿದಾಗ ಸಿಡುಕುವ ಕುಮಾರಸ್ವಾಮಿ, ಅಯ್ತು ಅವರದ್ದೇ ಪಕ್ಷ, ಬೇಕಿದ್ರೆ ಬೋರ್ಡ್ ಹಾಕ್ಕೊಳ್ಲಿ ಅಂತಾರೆ. ಅದೇ ವಿಷಯದ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳಿದಾಗ,  ದಯವಿಟ್ಟು ಬಾಲಿಶ ಪ್ರಶ್ನೆಗಳನ್ನು ಕೇಳಬೇಡಿ, ಪಕ್ಷ ಯಾರದ್ದು ಅಂತ ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ, ಅವರು ಉಚ್ಚಾಟನೆಯಾದರೂ ಮಾಡಿಕೊಳ್ಳಲಿ ಮತ್ತೇನಾದರೂ ಮಾಡಿಕೊಳ್ಳಲಿ, ಅವರ ಮಾತುಗಳನ್ನು ನಾವೇ ಗಂಭೀರವಾಗಿ ತೆಗೆದುಕೊಂಡಿಲ್ಲ, ನೀವ್ಯಾಕೆ ತಲೆ ಕೆಡಿಸಿಕೊಂಡಿದ್ದೀರಿ ಅಂತ ಕುಮಾರಸ್ವಾಮಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ