WPL 2026: 6,4,6,4..! ಕೊನೆಯ ಓವರ್ನಲ್ಲಿ ಪಂದ್ಯ ಗೆಲ್ಲಿಸಿದ ನಡಿನ್ ಡಿ ಕ್ಲರ್ಕ್; ವಿಡಿಯೋ ನೋಡಿ
RCB Kicks Off WPL 4th Season with Thrilling Win vs MI: ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಸೀಸನ್‌ಗೆ ಆರ್ಸಿಬಿ ಭರ್ಜರಿ ಆರಂಭ ಪಡೆದಿದೆ. ಮುಂಬೈ ವಿರುದ್ಧದ ರೋಚಕ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಬೀಗಿದೆ. ನಡಿನ್ ಡಿ ಕ್ಲರ್ಕ್ ಅವರ ಆಲ್‌ರೌಂಡರ್ ಪ್ರದರ್ಶನದಿಂದ ತಂಡಕ್ಕೆ ಸ್ಮರಣೀಯ ಜಯ ಲಭಿಸಿದೆ. ಕೊನೆಯ ಓವರ್‌ಗಳಲ್ಲಿ ಡಿ ಕ್ಲರ್ಕ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚಿ, ಪ್ರೇಕ್ಷಕರನ್ನು ಆಕರ್ಷಿಸಿದರು.
ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಸೀಸನ್‌ಗೆ ಯಾವ ರೀತಿಯ ಆರಂಭದ ಅವಶ್ಯಕತೆಯಿತ್ತೋ, ಅದೇ ರೀತಿಯ ಆರಂಭ ಸಿಕ್ಕಿದೆ. ಕೊನೆಯ ಎಸೆತದವರೆಗೂ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸಿದ್ದ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಮಣಿಸಿದ ಆರ್ಸಿಬಿ ಗೆಲುವಿನ ಶುಭಾರಂಭ ಮಾಡಿದೆ. ವಾಸ್ತವವಾಗಿ ಒಂದು ಹಂತದಲ್ಲಿ ಪಂದ್ಯ ಮುಂಬೈ ಪರ ವಾಲಿತ್ತು. ಆದರೆ ಕೊನೆಯವರೆಗೂ ಹೋರಾಟ ಬಿಟ್ಟುಕೊಡದ ಆರ್ಸಿಬಿಯ ಸ್ಟಾರ್ ಆಲ್‌ರೌಂಡರ್ ನಡಿನ್ ಡಿ ಕ್ಲರ್ಕ್ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ವಾಸ್ತವವಾಗಿ ಮುಂಬೈ ನೀಡಿದ 155 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ 18ನೇ ಓವರ್ ಅಂತ್ಯಕ್ಕೆ ಪ್ರಮುಖ 7 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿತ್ತು. ಹೀಗಾಗಿ ಕೊನೆಯ 2 ಎಸೆತಗಳಲ್ಲಿ ಆರ್ಸಿಬಿ ಗೆಲುವಿಗೆ 29 ರನ್ ಬೇಕಿತ್ತು. 19ನೇ ಓವರ್ನಲ್ಲಿ 11 ರನ್ಗಳು ಬಂದವು. ಅಂತಿಮವಾಗಿ ಕೊನೆಯ ಓವರ್ನಲ್ಲಿ ಆರ್ಸಿಬಿಗೆ 18 ರನ್ಗಳು ಬೇಕಿದ್ದವು.
ನ್ಯಾಟ್ ಸಿವರ್-ಬ್ರಂಟ್ ಎಸೆದ 20ನೇ ಓವರ್ನ ಮೊದಲ 2 ಎಸೆತಗಳಲ್ಲಿ ಕ್ಲರ್ಕ್ಗೆ ಯಾವುದೇ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ ಉಳಿದ 4 ಎಸೆತಗಳಲ್ಲಿ ಕ್ಲರ್ಕ್ ಕ್ರಮವಾಗಿ 6,4,6,4 ಬಾರಿಸಿ ಮುಂಬೈ ತಂಡದಿಂದ ಜಯವನ್ನು ಕಸಿದುಕೊಂಡರು. ನಾಡಿನ್ ಡಿ ಕ್ಲರ್ಕ್ ತಮ್ಮ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಡಿ ಕ್ಲರ್ಕ್ ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ ಬೌಲಿಂಗ್ನಲ್ಲೂ ನಾಲ್ಕು ಓವರ್‌ಗಳಲ್ಲಿ 26 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.

