ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್

Edited By:

Updated on: Aug 21, 2026 | 9:04 PM

ಆತ ಮನೆ ಸಂಸಾರ ಇಟ್ಟುಕೊಂಡೆ ಅಕ್ರಮವಾಗಿ ಅರಣ್ಯ ಭೂಮಿಯಲ್ಲಿ ದೇವರ ಹೆಸರಲ್ಲಿ ಮಠ ಮಾಡಿಕೊಂಡಿದ್ದಾನೆ. ದೈವ ಶಕ್ತಿಯಿದೆ ಅಂತ ಸಾಕಷ್ಟು ಜನರಿಗೆ ವಂಚಿಸುವ ಕೆಲಸ ಮಾಡಿದ್ದಾನೆ. ಅಷ್ಟೇ ಯಾಕೆ ಮಠದಲ್ಲಿ ಅಪ್ರಾಪ್ತ ಬಾಲಕಿಯರನ್ನ ಅಕ್ರಮವಾಗಿ ಇಟ್ಟುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೊನೆಗೆ ಕಾಮಿ ಸ್ವಾಮಿಯ ಬಣ್ಣ ಬಯಲಾಗಿದ್ದ ಪೊಲೀಸರ ಅತಿಥಿಯಾಗಿದ್ದಾನೆ.

ಯಾದಗಿರಿ, (ಆಗಸ್ಟ್ 21): ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಠದಲ್ಲಿ ಸ್ವಾಮೀಜಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಅಣ್ಣಪ್ಪ ಸ್ವಾಮಿ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಭಾಗ್ಯವಂತಿ ದೇವರ ಹೆಸರಲ್ಲಿ ಮಠ ಮಾಡಿಕೊಂಡಿದ್ದಾನೆ. ಕಳೆದ ಆರೇಳು ವರ್ಷಗಳಿಂದ ಮಠ ಮಾಡಿಕೊಂಡು ಸಾವಿರಾರು ಭಕ್ತರಿಗೆ ತನ್ನಲ್ಲಿ ದೈವ ಶಕ್ತಿಯಿದೆ ಅಂತ ಸೆಳೆದಿದ್ದಾನೆ. ಇದೆ ಕಾರಣಕ್ಕೆ ಮಠಕ್ಕೆ ಮಂಗಳವಾರ ಹಾಗೂ ಶುಕ್ರವಾರ ನೂರಾರು ಜನ ಭಕ್ತರು ಬಂದು ಹೋಗ್ತಾಯಿದ್ರು. ಆದ್ರೆ ಈ ಸ್ವಾಮೀಜಿ ಕಳೆದ ಮೂರು ವರ್ಷಗಳಿಂದ ತಮ್ಮ ಮಠದಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರನ್ನ ಅಕ್ರಮವಾಗಿ ತನ್ನ ಮಠದಲ್ಲಿ ಇರಿಸಿಕೊಂಡಿದ್ದಾನೆ. ಇದರಲ್ಲಿ 16 ವರ್ಷದ ಅಪ್ರಾಪ್ತ ಮೇಲೆ‌ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ಅಪ್ರಾಪ್ತ ಬಾಲಕಿಯ ತಾಯಿ ಮಹಿಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಮಹಿಳಾ ಅಭಿವೃದ್ಧಿ ಇಲಾಖೆ ವಲಯ ನಿರೀಕ್ಷಕಿ ನಾಗಮ್ಮ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಣ್ಣಪ್ಪ ಸ್ವಾಮೀಜಿ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us