ಬರ ಪರಿಹಾರದಲ್ಲಿ ವ್ಯತ್ಯಾಸ: ರೈತರು ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಮುಖ್ಯಾಂಶಗಳು
- ಬರ ಪರಿಹಾರ ಹಣದ ವಿಚಾರದಲ್ಲಿ ಸರ್ಕಾರಕ್ಕೆ ಶಾಕ್ ನೀಡಿದ ರೈತರು
- ಪರಿಹಾರದ ಹಣ ವಾಪಸ್ ನೀಡಲು ಸರ್ಕಾರದ ಹೆಸರಿಗೆ ಚೆಕ್ ಬರೆದ ಅನ್ನದಾತರು
- ಯಾದಗಿರಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ರೈತರ ವಿನೂತನ ಪ್ರತಿಭಟನೆ
ರಾಜ್ಯ ಸರ್ಕಾರ ಘೋಷಿಸಿದ 2,500 ರೂ ಬರ ಪರಿಹಾರ ಬದಲು, ಯಾದಗಿರಿ ರೈತರಿಗೆ 1,500 ರೂ ಮಾತ್ರ ಜಮೆಯಾಗಿದೆ. ಇದರಿಂದ ಆಕ್ರೋಶಗೊಂಡ ರೈತರು, ಉಳಿದ 1,000 ರೂ ಸೇರಿಸಿ 2,500 ರೂ ಮೊತ್ತದ ಚೆಕ್‌ಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.
ಯಾದಗಿರಿ, ನವೆಂಬರ್ 10: ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ರೈತರಿಗೆ ಇನ್‌ಪುಟ್ ಸಬ್ಸಿಡಿಯಾಗಿ ಪ್ರತಿ ರೈತರಿಗೆ 2,500 ರೂ ಮೊದಲ ಕಂತಿನಲ್ಲಿ ನೀಡುವುದಾಗಿ ಘೋಷಿಸಿತ್ತು. ಆದರೆ ಯಾದಗಿರಿ ಜಿಲ್ಲೆಯ ಹೊನಗೇರ ಗ್ರಾಮದ ಕೆಲ ರೈತರಿಗೆ 1,000, 1,500 ಮತ್ತೊಬ್ಬರಿಗೆ 2,000 ಮಾತ್ರ ಖಾತೆಗೆ ಜಮೆಯಾಗಿದೆ. ಆ ಮೂಲಕ ಬರ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಖಾತೆಗೆ ಜಮೆಯಾದ 1,500 ರೂ ಪರಿಹಾರದ ಜೊತೆಗೆ ತಮ್ಮ ಕೈಯಿಂದ 1,000 ರೂ ಸೇರಿಸಿ ಒಟ್ಟು 2,500 ಮೊತ್ತದ ಚೆಕ್ ಅನ್ನು ಬರೆದು ವಾಪಸ್ ಕಳುಹಿಸುತ್ತಿದ್ದಾರೆ. ಆ ಮೂಲಕ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ. ‘ನಿಮ್ಮ ಹಣ ನಮಗೆ ಬೇಡ, ನಮ್ಮ ಹಣವನ್ನೇ ತಗೊಳ್ಳಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
