ಅರಮನೆಯ ದಸರಾ ಸಂಭ್ರಮ ದುಪ್ಪಟ್ಟು, ಮತ್ತೊಂದು ಗಂಡುಮಗುವಿಗೆ ಜನ್ಮನೀಡಿದ ತ್ರಿಷಿಕಾ ಕುಮಾರಿ!

ಅರಮನೆಯ ದಸರಾ ಸಂಭ್ರಮ ದುಪ್ಪಟ್ಟು, ಮತ್ತೊಂದು ಗಂಡುಮಗುವಿಗೆ ಜನ್ಮನೀಡಿದ ತ್ರಿಷಿಕಾ ಕುಮಾರಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 11, 2024 | 1:48 PM

ಮಗು ನವರಾತ್ರಿ ಪೂಜಾ ಕೈಂಕರ್ಯಗಳ 9 ನೇ ಮತ್ತು ಮಹಾಲಕ್ಷ್ಮಿಯ ದಿನವೂ ಅಗಿರುವ ಶುಕ್ರವಾರದಂದು ಹುಟ್ಟಿದ್ದಲ್ಲದೆ ಜನ್ಮನೀಡಿದ ತ್ರಿಷಿಕಾ ಕುಮಾರಿ ಅವರ ಹೆಸರಿನ ಅರ್ಥ ಕೂಡ ಮಹಾಲಕ್ಷ್ಮಿ ಆಗಿರುವುದರಿಂದ ಮಗುವಿನ ಜನನ ಶುಭದಾಯಕ ಎಂದು ಆಧ್ಯಾತ್ಮ ಗುರು ಡಾ ಶೆಲ್ವ ಪಿಳ್ಳೆ ಅಯ್ಯಂಗಾರ್ ಅವರು ತಿಳಿಸಿದ್ದಾರೆ.

ಮೈಸೂರು: ರಾಜ್ಯದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಕೇಂದ್ರಬಿಂದುವಾಗಿರುವ ಯದುವಂಶ ಮತ್ತು ಹಿಂದಿನ ಒಡೆಯರ್ ಅರಸೊತ್ತಿಗೆಯ ಮೈಸೂರು ಅರಮನೆಯಲ್ಲಿ ಸಂಭ್ರಮ ಇಮ್ಮಡಿಸಿದೆ. ಒಡೆಯರ್ ವಂಶದ ಪ್ರತಿನಿಧಿ ಮತ್ತು ಸಂಸದ ಯದುವೀರ್ ಕೃಷ್ಣದತ್ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರು ಇಂದು ಬೆಳಗ್ಗೆ ಮತ್ತೊಂದು ಗಂಡುಮಗುಗೆ ಜನ್ಮ ನೀಡಿದ್ದಾರೆ. ಯದುವೀರ್ ಅವರ ಮೊದಲ ಮಗು ಸಹ ಗಂಡು ಸಂತಾನ ಅನ್ನೋದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು ಅರಮನೆಯಲ್ಲಿ ಕಳೆಗಟ್ಟಿದ ದಸರಾ ಕಲರವ; ರಾಜ ಪೋಷಾಕಿನಲ್ಲಿ ಮಿಂಚಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್