ನವ ನಕ್ಷತ್ರ ಸನ್ಮಾನ ವೇದಿಕೆಯಲ್ಲಿ ಕನ್ನಡ ಐಕ್ಯತೆ ಸಾರುವ ನೃತ್ಯ ಪ್ರದರ್ಶನ

Edited By:

Updated on: Jan 05, 2022 | 7:43 AM

ನವ ನಕ್ಷತ್ರ ಕಾರ್ಯಕ್ರಮದಲ್ಲಿ ನೃತ್ಯಗಳು ಗಮನ ಸೆಳೆದವು. ಕನ್ನಡ ಐಕ್ಯತೆ ಸಾರುವ ನೃತ್ಯ ಮನ ಸೆಳೆಯಿತು. ಹಳದಿ ಮತ್ತು ಕೆಂಪು ಬಣ್ಣದ ಬಟ್ಟೆ ತೊಟ್ಟು ಹೆಜ್ಜೆ ಹಾಕಿದರು.

ಟಿವಿ9 ಕನ್ನಡ ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟಿವಿ9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಈ ಬಾರಿ ಸುಮಾರು 9 ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನೃತ್ಯಗಳು ಗಮನ ಸೆಳೆದವು. ಕನ್ನಡ ಐಕ್ಯತೆ ಸಾರುವ ನೃತ್ಯ ಮನ ಸೆಳೆಯಿತು. ಹಳದಿ ಮತ್ತು ಕೆಂಪು ಬಣ್ಣದ ಬಟ್ಟೆ ತೊಟ್ಟು ಹೆಜ್ಜೆ ಹಾಕಿದರು. ಇನ್ನು ಭರತನಾಟ್ಯ, ಕರಾವಳಿ ಗಂಡು ಕಲೆಯಾದ ಯಕ್ಷಗಾನಕ್ಕೆ ಕಲಾವಿದರು ಹೆಜ್ಜೆ ಹಾಕಿದರು.

ಇದನ್ನೂ ಓದಿ

ನವ ನಕ್ಷತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ: ಫೋಟೋಗಳು ಇಲ್ಲಿವೆ

‘ಒಳ್ಳೆಯ ಕೆಲಸಕ್ಕೆ ಇದು ಸ್ಫೂರ್ತಿ’; ನವನಕ್ಷತ್ರ ಸನ್ಮಾನ ಕುರಿತು ರಘು ದೀಕ್ಷಿತ್​ ಮಾತು