‘ಕೆಜಿಎಫ್: ಚಾಪ್ಟರ್ 2’ ಟಿಕೆಟ್ ಪಡೆಯಲು ಫ್ಯಾನ್ಸ್ ಹರಸಾಹಸ; ಕಾಲು ಮೇಲೆ ಮಾಡಿ ನಿಂತ ಅಭಿಮಾನಿ
ಯಶ್ ಅಭಿಮಾನಿಗಳಿಗೆ ಇಂದು ನಿಜವಾದ ಹಬ್ಬ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ನೋಡಿ ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ.
ಅದ್ದೂರಿಯಾಗಿ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಬಿಡುಗಡೆ ಆಗಿದೆ. ಯಶ್ (Yash) ನಟನೆ ಮತ್ತು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ಬಹುಕಾಲದಿಂದ ಕಾದಿದ್ದರು. ಇಂದು (ಏ.14) ದೇಶಾದ್ಯಂತ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ‘ಕೆಜಿಎಫ್ 2’ ಸಿನಿಮಾ ಅಬ್ಬರಿಸಿದೆ. ಇಂಥ ಹೈವೋಲ್ಟೇಜ್ ಸಿನಿಮಾಗಳ ಫಸ್ಟ್ ಡೇ ಟಿಕೆಟ್ ಪಡೆಯುವುದು ಎಂದರೆ ಸುಲಭದ ಮಾತಲ್ಲ. ಹಾಗಂತ ಅಭಿಮಾನಿಗಳು (Yash Fans) ಸುಮ್ಮನೆ ಬಿಡುವುದೂ ಇಲ್ಲ. ಕೊಪ್ಪಳದಲ್ಲಿ ಅಭಿಮಾನಿಯೊಬ್ಬರು ಕಾಲು ಮೇಲೆ ಮಾಡಿ ನಿಂತು ಟಿಕೆಟ್ ಪಡೆದಿದ್ದಾರೆ. ಟಿಕೆಟ್ ಸಲುವಾಗಿ ಅವರ ಮಾಡಿದ ಸಾಹಸ ಈ ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:
‘ಕೆಜಿಎಫ್ 3ನೇ ಪಾರ್ಟ್ ಬರಲಿದೆ’: ಭವಿಷ್ಯ ನುಡಿದ ಪ್ರೇಕ್ಷಕರು; ಯಶ್ ಫ್ಯಾನ್ಸ್ ಹೀಗೆ ಹೇಳ್ತಿರೋದು ಏಕೆ?
Loading...
Unable to load recommendations.
Follow Us
