ಬಾಡಿಗಾರ್ಡ್​ ಮೇಲೆ ಏಕಾಏಕಿ ಗರಂ ಆದ ಯಶ್​; ಧರ್ಮಸ್ಥಳದಲ್ಲಿ ಅಂಥದ್ದೇನಾಯ್ತು?

Updated on: Aug 06, 2024 | 5:40 PM

ನಟ ಯಶ್​ ಅವರು ಧರ್ಮಸ್ಥಳಕ್ಕೆ ಬಂದು ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆದ ನಂತರ ಅವರರನ್ನು ನೋಡಲು ಫ್ಯಾನ್ಸ್​ ಮುಗಿಬಿದ್ದಿದ್ದಾರೆ. ಈ ವೇಳೆ ಸ್ವಲ್ಪ ನೂಕು ನುಗ್ಗಲು ಉಂಟಾಗಿದೆ. ಸೆಲ್ಫಿಗಾಗಿ ಮುಗಿಬೀಳುವ ಅಭಿಮಾನಿಗಳನ್ನು ನಿಭಾಯಿಸುವುದು ಸುಲಭವಲ್ಲ. ಧರ್ಮಸ್ಥಳದಲ್ಲೂ ಅದೇ ರೀತಿ ಆಗಿದೆ.

‘ರಾಕಿಂಗ್​ ಸ್ಟಾರ್​’ ಯಶ್​ ಅವರು ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ. ಇಂದು (ಆಗಸ್ಟ್​ 6) ಅವರು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬಂದಿದ್ದಾರೆ. ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಆಗಮಿಸಿದ ಯಶ್​ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಯಶ್​ ಈಗ ಪ್ಯಾನ್​ ಇಂಡಿಯಾ ಸ್ಟಾರ್​. ಅವರನ್ನು ಹತ್ತಿರದಿಂದ ನೋಡಬೇಕು, ಜೊತೆಗೊಂದು ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಫ್ಯಾನ್ಸ್ ಆಸೆ. ಹಾಗಾಗಿ ಧರ್ಮಸ್ಥಳದಲ್ಲೂ ಯಶ್​ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದರು. ಈ ಸಂದರ್ಭದಲ್ಲಿ ಜನಜಂಗುಳಿ ನಿಭಾಯಿಸಲು ಕೆಲವರನ್ನು ಬಾಡಿಗಾರ್ಡ್ಸ್​ ತಳ್ಳಿದರು. ಇದರಿಂದ ಯಶ್​ ಅವರಿಗೆ ಸಡನ್​ ಆಗಿ ಕೋಪ ಬಂತು. ಯಶ್​ ಗರಂ ಆಗಿ ಪ್ರತಿಕ್ರಿಯಿಸಿದ ವಿಡಿಯೋ ಇಲ್ಲಿದೆ. ‘ಟಾಕ್ಸಿಕ್​’ ಸಿನಿಮಾದ ಕೆಲಸಗಳಲ್ಲಿ ಯಶ್​ ತೊಡಗಿಕೊಂಡಿದ್ದಾರೆ. ಅದರ ನಡುವೆ ಬಿಡುವು ಮಾಡಿಕೊಂಡು ಅವರು ದೇವಸ್ಥಾನಕ್ಕೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More