AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ತಾಯಿ ಪುಷ್ಪಾ ಮನೆ ಕಾಂಪೌಂಡ್ ಧ್ವಂಸ: ಲಾಯರ್ ಮೊದಲ ಪ್ರತಿಕ್ರಿಯೆ

ಯಶ್ ತಾಯಿ ಪುಷ್ಪಾ ಮನೆ ಕಾಂಪೌಂಡ್ ಧ್ವಂಸ: ಲಾಯರ್ ಮೊದಲ ಪ್ರತಿಕ್ರಿಯೆ

ಮಂಜುನಾಥ ಕೆಬಿ
| Edited By: |

Updated on:Jan 04, 2026 | 12:54 PM

Share

ಹಾಸನದಲ್ಲಿ ಇರುವ ಯಶ್ ತಾಯಿ ಪುಷ್ಪಾ ಅರುಣ್​ಕುಮಾರ್ ಅವರ ಮನೆಯ ಕಾಂಪೌಂಡ್ ಧ್ವಂಸ ಮಾಡಲಾಗಿದೆ. ದೇವರಾಜು ಎಂಬುವವರು ಕೋರ್ಟ್ ಆದೇಶದ ಮೇರೆಗೆ ಕೌಂಪೌಂಡ್ ತೆರವುಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪುಷ್ಪಾ ಅರುಣ್​ಕುಮಾರ್ ಪರ ಲಾಯರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ಹಾಸನದಲ್ಲಿ ಇರುವ ಯಶ್ ತಾಯಿ (Yash Mother) ಪುಷ್ಪಾ ಅರುಣ್​ಕುಮಾರ್ ಅವರ ಮನೆಯ ಕಾಂಪೌಂಡ್ ಧ್ವಂಸ ಮಾಡಲಾಗಿದೆ. ದೇವರಾಜು ಎಂಬುವವರು ಕೋರ್ಟ್ ಆದೇಶದ ಮೇರೆಗೆ ಕೌಂಪೌಂಡ್ ತೆರವುಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪುಷ್ಪಾ ಅರುಣ್​ಕುಮಾರ್ ಪರ ಲಾಯರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ದೇವರಾಜು ಅವರು ಪಡೆದುಕೊಂಡ ಆದೇಶಕ್ಕೆ ಸಂಬಂಧಿಸಿದ ಆಸ್ತಿಯೇ ಬೇರೆ. ಈ ಆಸ್ತಿಯೇ ಬೇರೆ. ಇದರಲ್ಲಿ ಅವರು ಸ್ವಾದೀನ ಪಡೆಯಬೇಕು ಎಂದರೆ ಪ್ರತ್ಯೇಕ ಆದೇಶ ಪಡೆಯಬೇಕು. ದುರುದ್ದೇಶದಿಂದ ಅವರು ಆದೇಶ ಪಡೆದುಕೊಂಡಿದ್ದಾರೆ. ನೋಟಿಸ್ ಜಾರಿ ಆಗಿಲ್ಲ. ಅದೇ ಹಿನ್ನಲೆಯಲ್ಲಿ ನಾನು ಪ್ರಕರಣ ದಾಖಲಿಸಿದ್ದೇವೆ. ಕೊನೆ ಹಂತದಲ್ಲಿ ಈ ರೀತಿ ಮಾಡಿದ್ದಾರೆ’ ಎಂದು ಪುಷ್ಪಾ ಅರುಣ್​ಕುಮಾರ್ (Pushpa Arunkumar) ಪರ ವಕೀಲರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 04, 2026 12:48 PM