VIDEO: ಶತಕ ಬಾರಿಸಿ ಅಶ್ಲೀಲವಾಗಿ ಸಂಭ್ರಮಿಸಿದ RCB ಆಟಗಾರ
Karnataka vs Tripura: ಈ ಕಠಿಣ ಗುರಿ ಬೆನ್ನತ್ತಿದ ತ್ರಿಪುರ ಪರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ವಪ್ನಿಲ್ ಸಿಂಗ್ 93 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಶತಕ ಸಿಡಿಸಿದರು. ಈ ಶತಕದ ಬೆನ್ನಲ್ಲೇ ಬ್ಯಾಟ್ ಮೂಲಕ ಅಶ್ಲೀಲ ಸನ್ನೆ ಮಾಡಿ ಸ್ವಪ್ನಿಲ್ ವಿಚಿತ್ರವಾಗಿ ಸಂಭ್ರಮಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಜಯ ಹಝಾರೆ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ ಶತಕ ಸಿಡಿಸಿ ತ್ರಿಪುರ ಆಟಗಾರ ಸ್ವಪ್ನಿಲ್ ಸಿಂಗ್ ಅಶ್ಲೀಲವಾಗಿ ಸಂಭ್ರಮಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಪರ ದೇವದತ್ ಪಡಿಕ್ಕಲ್ (108) ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ಕರ್ನಾಟಕ ತಂಡವು 50 ಓವರ್ಗಳಲ್ಲಿ 332 ರನ್ ಕಲೆಹಾಕಿತು.
ಈ ಕಠಿಣ ಗುರಿ ಬೆನ್ನತ್ತಿದ ತ್ರಿಪುರ ಪರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ವಪ್ನಿಲ್ ಸಿಂಗ್ 93 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಶತಕ ಸಿಡಿಸಿದರು. ಈ ಶತಕದ ಬೆನ್ನಲ್ಲೇ ಬ್ಯಾಟ್ ಮೂಲಕ ಅಶ್ಲೀಲ ಸನ್ನೆ ಮಾಡಿ ಸ್ವಪ್ನಿಲ್ ವಿಚಿತ್ರವಾಗಿ ಸಂಭ್ರಮಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ 333 ರನ್ಗಳ ಗುರಿ ಬೆನ್ನತ್ತಿದ ತ್ರಿಪುರ ತಂಡವು 49 ಎಸೆತಗಳಲ್ಲಿ 252 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಮೂಲಕ ಕರ್ನಾಟಕ ತಂಡವು 80 ರನ್ಗಳ ಜಯ ಸಾಧಿಸಿದೆ.
ಅಂದಹಾಗೆ ಸ್ವಪ್ನಿಲ್ ಸಿಂಗ್ ಮುಂಬರುವ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ. ಕಳೆದೆರಡು ಸೀಸನ್ಗಳಿಂದ ಆರ್ಸಿಬಿ ತಂಡದ ಭಾಗವಾಗಿರುವ ಸ್ವಪ್ನಿಲ್ ಮುಂಬರುವ ಟೂರ್ನಿಯಲ್ಲಿ ಆರ್ಸಿಬಿ ತಂಡದ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

