ಕೈ ಮುರಿದರೂ ಡ್ಯಾನ್ಸ್ ಪ್ರಾಕ್ಟೀಸ್ ಮಾಡಲು ಬಂದಿದ್ದ ಯಶ್; ಇದು ರಾಕಿ ಡೆಡಿಕೇಷನ್

|

Updated on: Aug 06, 2023 | 11:41 AM

‘ರಾಕಿ’ ಚಿತ್ರಕ್ಕೆ ಮುರಳಿ ಮಾಸ್ಟರ್ ಕೊರಿಯೋಗ್ರಾಫಿ ಇತ್ತು. ಯಶ್ ಅವರ ಡೆಡಿಕೇಷನ್ ಬಗ್ಗೆ ಮುರುಳಿ ಮಾತನಾಡಿದ್ದಾರೆ.

ಕೋಮಲ್​ ಕುಮಾರ್ ಹಾಗೂ ಲೇಖಾ ಚಂದ್ರ ನಟನೆಯ ‘ನಮೋ ಭೂತಾತ್ಮ 2’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಕೊರಿಯೋಗ್ರಾಫರ್ ಆಗಿರುವ ಮುರುಳಿ ಮಾಸ್ಟರ್ (Muruli Master) ನಿರ್ದೇಶನ ಮಾಡಿದ್ದಾರೆ. ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ‘ರಾಕಿ’ ಚಿತ್ರಕ್ಕೆ ಮುರಳಿ ಮಾಸ್ಟರ್ ಕೊರಿಯೋಗ್ರಾಫಿ ಇತ್ತು. ಯಶ್ (Yash) ಅವರ ಡೆಡಿಕೇಷನ್ ಬಗ್ಗೆ ಮುರುಳಿ ಮಾತನಾಡಿದ್ದಾರೆ. ‘ಯಶ್ ಹಾರ್ಡ್​ ವರ್ಕರ್​. ಪ್ರಾಕ್ಟೀಸ್ ಮಾಡುತ್ತಲೇ ಇರುತ್ತಾರೆ. ಅವರು ಹಿಡಿದ ಕೆಲಸ ಬಿಡುವವರಲ್ಲ. ರಾಕಿ ಶೂಟಿಂಗ್ ಸಂದರ್ಭದಲ್ಲಿ ಕೈ ಮುರಿದು ಹೋಗಿತ್ತು. ಅವರು ವಿಶ್ರಾಂತಿ ಪಡೆಯುತ್ತಾರೆ ಎಂದುಕೊಂಡಿದ್ದೆ. ಆದರೆ, ಬ್ಯಾಂಡೇಜ್ ಹಾಕಿಕೊಂಡು ಅವರು ಡ್ಯಾನ್ಸ್ ಪ್ರಾಕ್ಟೀಸ್​ಗೆ ಬಂದಿದ್ರು’ ಎಂದು ಹಳೆ ಘಟನೆ ಬಗ್ಗೆ ಹೇಳಿದ್ದಾರೆ ಮುರುಳಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ