‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್

Edited By:

Updated on: Aug 24, 2026 | 7:28 PM

ಆಗಸ್ಟ್ 26ರಂದು ‘ಟಾಕ್ಸಿಕ್’ ಬಿಡುಗಡೆ ಆಗುತ್ತಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಆಗಲಿದೆ. ಯಶ್, ರುಕ್ಮಿಣಿ ವಸಂತ್, ನಯನತಾರಾ ಮುಂತಾದವರು ನಟಿಸಿರುವ ಈ ಸಿನಿಮಾಗೆ ಸಖತ್ ಬೇಡಿಕೆ ಇದೆ. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬಗ್ಗೆ ಪ್ರದರ್ಶಕ ಜಗದೀಶ್ ಅವರು ಟಿವಿ9 ಜತೆ ಮಾತನಾಡಿದ್ದಾರೆ.

ಆಗಸ್ಟ್ 26ರಂದು ಅದ್ದೂರಿಯಾಗಿ ‘ಟಾಕ್ಸಿಕ್’ ಸಿನಿಮಾ (Toxic Movie) ಬಿಡುಗಡೆ ಆಗುತ್ತಿದೆ. ಮೊದಲ ದಿನ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗಲಿದೆ. ಯಶ್, ರುಕ್ಮಿಣಿ ವಸಂತ್, ನಯನತಾರಾ ಮುಂತಾದವರು ನಟಿಸಿರುವ ಈ ಸಿನಿಮಾಗೆ ಸಖತ್ ಬೇಡಿಕೆ ಇದೆ. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬಗ್ಗೆ ಪ್ರದರ್ಶಕ ಜಗದೀಶ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಈ ರೀತಿ ಬುಕಿಂಗ್ ಆಗುತ್ತಿರುವುದು ಕಾಂತಾರ ಬಳಿಕ ಈ ಸಿನಿಮಾಗೆ ನಾನು ನೋಡುತ್ತಿರುವುದು. ಬುಕಿಂಗ್ ಶುರುವಾದ ಕೇವಲ 10-15 ನಿಮಿಷಕ್ಕೆ ಟಿಕೆಟ್​ಗಳು ಸೋಲ್ಡ್ ಔಟ್ ಆಗುತ್ತಿವೆ. ಸಿನಿಮಾ ತಂಡದವರಿಗೆ ಟಿಕೆಟ್ ಬೇಕು ಎಂದರೂ ಕೊಡಿಸಲು ನಮಗೆ ಕಷ್ಟ ಆಗುತ್ತಿದೆ. ಕರ್ನಾಟಕದಲ್ಲಿ ಬುಕಿಂಗ್ ಓಪನ್ ಆದ ದಿನ 1 ಗಂಟೆಯಲ್ಲಿ 25 ಸಾವಿರ ಟಿಕೆಟ್ ಮಾರಾಟ ಆಗುತ್ತಿತ್ತು. ಇದು ದೊಡ್ಡ ಮಾರ್ಕೆಟ್’ ಎಂದು ಜಗದೀಶ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us