‘ಗರಡಿ’: ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು

|

Updated on: Sep 27, 2023 | 10:57 PM

Darshan: ಯಶಸ್ ಸೂರ್ಯ ನಟನೆಯ 'ಗರಡಿ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಮಾತನಾಡಿದ ಯಶಸ್ ಸೂರ್ಯ, ತಮ್ಮ ಕಷ್ಟದ ಸಮಯದಲ್ಲಿ ದರ್ಶನ್ ಮಾಡಿರುವ ಸಹಾಯವನ್ನು ನೆನಪು ಮಾಡಿಕೊಂಡಿದ್ದಾರೆ.

ಯಶಸ್ ಸೂರ್ಯಾ (Yashas Surya) ನಾಯಕನಾಗಿ ನಟಿಸಿ, ಯೋಗರಾಜ್ ಭಟ್ ನಿರ್ದೇಶಿಸಿ, ಮಾಜಿ ಸಚಿವ ಬಿಸಿ ಪಾಟೀಲ್ ನಿರ್ಮಾಣ ಮಾಡಿರುವ ‘ಗರಡಿ‘ (Garadi) ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಸಿನಿಮಾದ ಹಾಡುಗಳನ್ನು ಇತ್ತೀಚಿಗೆ ಡುಗಡೆ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಯಶಸ್ ಸೂರ್ಯ, ನಟ ದರ್ಶನ್ ತಮಗೆ ಮಾಡಿರುವ ಸಹಾಯವನ್ನು ನೆನೆದು ಭಾವುಕರಾದರು. ದರ್ಶನ್ ಅವರಿಂದಾಗಿಯೇ ತಮಗೆ ‘ಗರಡಿ’ ಸಿನಿಮಾದ ಅವಕಾಶ ದೊರೆಯಿತು ಎಂದು ಸಹ ಯಶಸ್ ಈ ಸಂದರ್ಭದಲ್ಲಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ