AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಹುಟ್ಟೂರು ಹಾಸನದಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಅದ್ದೂರಿ ಸ್ವಾಗತ

ಯಶ್ ಹುಟ್ಟೂರು ಹಾಸನದಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಅದ್ದೂರಿ ಸ್ವಾಗತ

ರಾಜೇಶ್ ದುಗ್ಗುಮನೆ
|

Updated on:Aug 26, 2026 | 9:57 AM

Share

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಹಾಸನದಲ್ಲಿ ಮುಂಜಾನೆ 6 ಗಂಟೆಯಿಂದಲೇ ಫ್ಯಾನ್ ಶೋಗಳು ಆರಂಭವಾಗಿದ್ದು, ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ನೋಡಲು ಥಿಯೇಟರ್‌ಗಳತ್ತ ಧಾವಿಸಿದ್ದಾರೆ. ಚಿತ್ರದ ಕುರಿತು ಭಾರಿ ನಿರೀಕ್ಷೆಗಳಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಇದರ ಅಂಗವಾಗಿ ಹಾಸನದಲ್ಲಿಯೂ ಅಭಿಮಾನಿಗಳು ಮುಂಜಾನೆ 6 ಗಂಟೆಯಿಂದಲೇ ಫ್ಯಾನ್ ಶೋಗಳಿಗೆ ಮುಗಿಬಿದ್ದಿದ್ದಾರೆ. ಹಾಸನದ ಎಸ್.ಬಿ.ಜಿ ಥಿಯೇಟರ್ ಮತ್ತು ಗುರು ಥಿಯೇಟರ್‌ಗಳಲ್ಲಿ ಮೊದಲ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದಾರೆ.

ಹಲವು ವರ್ಷಗಳಿಂದ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬಂದು, ತಮ್ಮ ನೆಚ್ಚಿನ ನಾಯಕನನ್ನು ತೆರೆ ಮೇಲೆ ನೋಡಲು ಉತ್ಸುಕರಾಗಿದ್ದಾರೆ. ಸಿನಿಮಾ ಕುರಿತು ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಅಭಿಮಾನಿಗಳು, ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಕರ್ನಾಟಕದಲ್ಲಿ 1,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ಪ್ರದರ್ಶನ ಕಾಣುತ್ತಿದ್ದು, ಯಶ್ ಅವರ ಕಮ್‌ಬ್ಯಾಕ್‌ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಚಿತ್ರದ ಕುರಿತಾದ ವಿಮರ್ಶೆಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹಾಸನದ ಅಭಿಮಾನಿಗಳಲ್ಲಿ ಯಶ್ ತಮ್ಮದೇ ಜಿಲ್ಲೆಯವರು ಎಂಬ ವಿಶೇಷ ಹೆಮ್ಮೆಯೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Aug 26, 2026 09:54 AM

Follow Us