AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಟಾಕ್ಸಿಕ್ ಸಿನಿಮಾ ಬಿಡುಗಡೆ; ರಾವಣ ವೇಷ ತೊಟ್ಟು ಥಿಯೇಟರ್​​ಗೆ ಬಂದ ಅಭಿಮಾನಿ

Video: ಟಾಕ್ಸಿಕ್ ಸಿನಿಮಾ ಬಿಡುಗಡೆ; ರಾವಣ ವೇಷ ತೊಟ್ಟು ಥಿಯೇಟರ್​​ಗೆ ಬಂದ ಅಭಿಮಾನಿ

ಅಕ್ಷತಾ ವರ್ಕಾಡಿ
|

Updated on: Aug 26, 2026 | 10:51 AM

Share

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಿ ಭಾರಿ ಪ್ರತಿಕ್ರಿಯೆ ಗಳಿಸಿದೆ. ವೀರೇಶ್ ಥಿಯೇಟರ್ ಬಳಿ ರಾವಣ ವೇಷದಲ್ಲಿ ಬಂದ ಅಭಿಮಾನಿಯೊಬ್ಬರು, ಇದು ಕನ್ನಡಿಗರ ಹೆಮ್ಮೆಯ ಸಿನಿಮಾ ಎಂದು ಬಣ್ಣಿಸಿದ್ದಾರೆ. ಯಶ್ ಕನ್ನಡ ಚಿತ್ರರಂಗವನ್ನು ಭಾರತೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಹೇಳಿದ ಅವರು, ಅಭಿಮಾನಿಗಳ ವಾರ್‌ ಮಾಡದೆ ಎಲ್ಲರೂ ಸಿನಿಮಾವನ್ನು ಬೆಳೆಸುವಂತೆ ಮನವಿ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾ ಇಂದು ವಿಶ್ವದಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಕರ್ನಾಟಕದಲ್ಲಿ 1,500 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಮೊದಲ ದಿನವೇ ಅಭಿಮಾನಿಗಳಿಂದ ಭಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಲ್ಕು ವರ್ಷಗಳ ಬಳಿಕ ಯಶ್ ಸಿನಿಮಾ ತೆರೆಕಂಡಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಬೆಂಗಳೂರಿನ ವೀರೇಶ್ ಥಿಯೇಟರ್ ಬಳಿ ಅಭಿಮಾನಿಗಳೊಬ್ಬರು ರಾವಣ ವೇಷದಲ್ಲಿ, ಮತ್ತೊಬ್ಬರು ಗಾಂಧೀಜಿ ವೇಷದಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ರಾವಣ ವೇಷಧಾರಿ ಅಭಿಮಾನಿ ಮಾತನಾಡಿ, “ನಾವು ಯಶ್ ಬಾಸ್ ಅವರ ಅಪ್ಪಟ ಅಭಿಮಾನಿಗಳು. ಅವರು ನಮ್ಮ ಕನ್ನಡ ಸಿನಿಮಾವನ್ನು ಭಾರತೀಯ ಮಟ್ಟಕ್ಕೆ ತಗೊಂಡು ಹೋಗಿದ್ದಾರೆ. ಟಾಕ್ಸಿಕ್ ಕರ್ನಾಟಕದ ಹೆಮ್ಮೆ. ಯಾವುದೇ ಫ್ಯಾನ್ಸ್ ವಾರ್ ಮಾಡಬಾರದು, ಇದು ನಮ್ಮ ಕರ್ನಾಟಕದ ಘನತೆ ಹೆಚ್ಚಿಸುವ ಮೂವಿ. ಎಲ್ಲರೂ ಸಿನಿಮಾವನ್ನು ಬೆಳೆಸಬೇಕು. KGF 1 ಕನ್ನಡ ನಂಬರ್ ಒನ್ ಮೂವಿ, KGF 2 ಭಾರತ ನಂಬರ್ ಒನ್ ಮೂವಿ, ಟಾಕ್ಸಿಕ್ ಹಾಲಿವುಡ್ ನಂಬರ್ ಒನ್ ಮೂವಿ ಆಗಲಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Follow Us