AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಯತೀಂದ್ರ ಬ್ರಿಗೇಡ್​​ನಿಂದ ಮಾದಪ್ಪಗೆ ವಿಶೇಷ ಪೂಜೆ

ಸಿದ್ದರಾಮಯ್ಯರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಯತೀಂದ್ರ ಬ್ರಿಗೇಡ್​​ನಿಂದ ಮಾದಪ್ಪಗೆ ವಿಶೇಷ ಪೂಜೆ

TV9 Web
| Updated By: ಸಾಧು ಶ್ರೀನಾಥ್​

Updated on: Sep 02, 2024 | 8:43 PM

ಸಿದ್ದು ಅಭಿಮಾನಿಗಳು ಕೈಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಮಪಲಕ ಹಿಡಿದು ಮಾದಪ್ಪನ ದೇಗುಲಕ್ಕೆ (Male Mahadeshwara Hills, Chamarajanagar) ಆಗಮಿಸಿದರು. ಸಿಎಂ ಪರ ತೀರ್ಪು ಬರುವಂತೆ ಡಾ. ಯತೀಂದ್ರ ಸಿದ್ದರಾಮಯ್ಯ ಯುವ ಬ್ರಿಗೇಡ್ ಇಂದು ಅಮಾವಾಸ್ಯೆ ಕಾರಣ ವಿಶೇಷ ಪೂಜೆ, ಪ್ರಾರ್ಥನೆ ಆಯೋಜನೆ ಮಾಡಲಾಗಿತ್ತು.

ಚಾಮರಾಜನಗರ, ಸೆ. 2: ಒಂದೆಡೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಾಸಿಕ್ಯೂಷನ್ ಟೆನ್ಷನ್, ಅದೇ ವೇಳೆ ಇತ್ತ ಸಿಎಂ ಸಿದ್ದರಾಮಯ್ಯರನ್ನ (CM Siddaramaiah) ಪ್ರಾಸಿಕ್ಯೂಷನ್ ಸಂಕಷ್ಟದಿಂದ ಪಾರು ಮಾಡುವಂತೆ ಅವರ ಅಭಿಮಾನಿಗಳು ಮಾದಪ್ಪನ ಮೊರೆ ಹೋದರು. ಸಂಕಷ್ಟ ಪರಿಹರಿಸುವಂತೆ ಮಲೆ ಮಹದೇಶ್ವರನಿಗೆ ( Sri Male Mahadeshwara) ಇಂದು ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು. ಡಾ. ಯತೀಂದ್ರ ಯುವ ಬ್ರಿಗೇಡ್ ವತಿಯಿಂದ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯ (Special pooja) ನೆರವೇರಿತು. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಅಧಿದೇವ ಮಾದಪ್ಪನಿಗೆ (MM Hills Madappa) ಅಮಾವಾಸ್ಯೆ ಹಾಗೂ ಸೋಮವಾರದಂದು ಮೊರೆ ಹೋದ್ರೆ ಸಂಕಷ್ಟ ಪರಿ ಹರಿಸುತ್ತಾನೆಂಬ ನಂಬಿಕೆ ( Faith on Amavasya and Monday) ಗಾಢವಾಗಿರುವ ಹಿನ್ನೆಲೆಯಲ್ಲಿ ಈ ವಿಶೇಷ ಪೂಜೆ ನೆರವೇರಿಸಿದರು.