ಬಿಎಸ್​ವೈ, ವಿಜಯೇಂದ್ರ ವಿರುದ್ಧ ಹೈಕಮಾಂಡ್​ಗೆ ದೂರು ನೀಡಲು ಯತ್ನಾಳ್ ತಂಡ ತೀರ್ಮಾನ

ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ಬಳಿಕ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,​ಅಪ್ಪ, ಮಕ್ಕಳಿಂದ ಪಕ್ಷ ನಾಶವಾಗುತ್ತಿದೆ. ಹೀಗಾಗಿ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಹೈಕಮಾಂಡ್​ಗೆ ದೂರು ನೀಡಲು ಯತ್ನಾಳ್ ತಂಡ ತೀರ್ಮಾನಿಸಿದೆ. ವಿಜಯೇಂದ್ರ ಮತ್ತು ಯಡಿಯೂರಪ್ಪ ಮಾಡಿರುವ ಪಕ್ಷ ವಿರೋಧಿ ಕೆಲಸವನ್ನು ಹೈಕಮಾಂಡ್​ಗೆ ತಿಳಿಸಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಬಿಎಸ್​ವೈ, ವಿಜಯೇಂದ್ರ ವಿರುದ್ಧ ಹೈಕಮಾಂಡ್​ಗೆ ದೂರು ನೀಡಲು ಯತ್ನಾಳ್ ತಂಡ ತೀರ್ಮಾನ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 01, 2024 | 4:39 PM

ಬೆಂಗಳೂರು, ಆಗಸ್ಟ್​ 01: ಅಪ್ಪ, ಮಕ್ಕಳಿಂದ ಬಿಜೆಪಿ (bjp) ಪಕ್ಷ ನಾಶವಾಗುತ್ತಿದೆ. ಅತೃಪ್ತರೆಲ್ಲಾ ಸೇರಿ ಹೈಕಮಾಂಡ್ ಗಮನಕ್ಕೆ ತರುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal)​ ಹೇಳಿದ್ದಾರೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ಬಳಿಕ ಟಿವಿ9 ಜೊತೆಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರಿ ಹೋಗುತ್ತಿಲ್ಲ. ಅಪ್ಪ, ಮಕ್ಕಳ ಪಕ್ಷವಾಗಿರುವುದನ್ನು ಮುಕ್ತ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದನ್ನು ಹೈಕಮಾಂಡ್ ಗಮನಕ್ಕೆ ತರಬೇಕು. ಅದಕ್ಕೆ ಸಮಾನ ಮನಸ್ಕರು, ಸೋತ ಅಭ್ಯರ್ಥಿಗಳು, ಗೆದ್ದವರು ಎಲ್ಲರೂ ಕೂಡ ಹೈಕಮಾಂಡ್​ಗೆ ವಿಜಯೇಂದ್ರ ಮತ್ತು ಯಡಿಯೂರಪ್ಪ ಮಾಡಿರುವ ಪಕ್ಷ ವಿರೋಧಿ ಕೆಲಸವನ್ನು ತಿಳಿಸಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮೊದಲು ನಾವೆಲ್ಲರೂ ದೊಡ್ಡ ಸಭೆ ಮಾಡಲು ತೀರ್ಮಾನ ಮಾಡಿದ್ದೇವೆ. ಸಭೆಯಲ್ಲಿ ಬರುವ ತೀರ್ಮಾನದಂತೆ ಹೈಕಮಾಂಡ್​ಗೆ ದೂರು ಕೊಡಲು ತೀರ್ಮಾನ ಮಾಡಿದ್ದೇವೆ. ನಮ್ಮ ಜೊತೆ ಸೇರುವವರು ಬಹಳ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಇಷ್ಟು ಅಸಮಾಧಾನ ಇದೆ ಅಂತಾ ನನಗೆ ಅನ್ನಿಸಿರಲಿಲ್ಲ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Follow us