ಹಾರ್ಟ್ ಸರ್ಜರಿ ಆಗಿದೆ ಟಿಕೆಟ್ ಬೇಡವೆಂದರೂ ಬೊಮ್ಮಾಯಿಗೆ ಯಡಿಯೂರಪ್ಪ ಟಿಕೆಟ್ ಕೊಡಿಸಿದರು: ಕೆಎಸ್ ಈಶ್ವರಪ್ಪ

|

Updated on: Mar 26, 2024 | 4:08 PM

ಹಿಂದೂತ್ವವನ್ನು ಪ್ರಖರವಾಗಿ ಪ್ರತಿಪಾದಿಸುವ ನಾಯಕರು ಯಡಿಯೂರಪ್ಪಗೆ ಬೇಕಿಲ್ಲ ಮತ್ತು ರಾಜ್ಯದಲ್ಲಿ ಅವರ ಕುಟುಂಬಕ್ಕೆ ಪರ್ಯಾಯವಾಗಿ ಬೆಳೆಯುವ ಲಿಂಗಾಯತ ಲೀಡರ್ ಇಷ್ಟವಿಲ್ಲ, ಅದೇ ಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತುಳಿದರು ಎಂದು ಈಶ್ವರಪ್ಪ ಗಟ್ಟಿ ಧ್ವನಿಯಲ್ಲಿ ಹೇಳಿದರು.

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎನ್ನುತ್ತಿರುವ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಅವರ ಪ್ರಚಾರದ ಅಜೆಂಡಾ ಒಂದೇ ಅನಿಸುತ್ತಿದೆ-ಬಿಎಸ್ ಯಡಿಯೂರಪ್ಪ (BS Yediyurappa) ಕುಟುಂಬ ರಾಜಕಾರಣ. ಇಂದು ನಗರದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಅವರು ಯಡಿಯೂರಪ್ಪರಿಂದ ತಾನು ಹೇಗೆ ಮೋಸ ಹೋದೆ ಅನ್ನೋದನ್ನು ಮತ್ತೊಮ್ಮೆ ವಿವರಿಸಿದರು. ಯಡಿಯೂರಪ್ಪರಂತೆ ತಾನು ಕುಟುಂಬ ರಾಜಕಾರಣ (dynastic politics) ಮಾಡುತ್ತಿಲ್ಲ ಯಾಕೆಂದರೆ ತನ್ನ ಮನೆಯಲ್ಲಿ ಶಾಸಕ ಸಂಸದರ್ಯಾರೂ ಇಲ್ಲ, ಆದರೆ ಯಡಿಯೂರಪ್ಪ ಮನೆಯಲ್ಲಿ ಶಾಸಕರಿದ್ದಾರೆ, ಸಂಸದರಿದ್ದಾರೆ ಮತ್ತು ಪಕ್ಷದ ಅಧ್ಯಕ್ಷರೂ ಇದ್ದಾರೆ, ಅದರೆ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀತಿಯಡಿ ತನ್ನ ಮಗನಿಗೆ ಯಾಕೆ ಟಿಕೆಟ್ ಇಲ್ಲ? ಎಂದು ಅವರು ಪ್ರಶ್ನಿಸಿದರು. ಬಸವರಾಜ ಬೊಮ್ಮಾಯಿ ತನಗೆ ಓಪನ್ ಹಾರ್ಟ್ ಸರ್ಜರಿ ಆಗಿದೆ, ಟಿಕೆಟ್ ಬೇಡ ಅಂತ ಚುನಾವಣಾ ಸಮಿತಿ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರೂ ಯಡಿಯೂರಪ್ಪ ತನ್ನ ಕುಟುಂಬಕ್ಕೆ ಪ್ರಾಮಿಸ್ ಮಾಡಿದ್ದ ಟಿಕೆಟ್ ಅವರಿಗೆ ಕೊಡಿಸಿದರು.

ಹಿಂದೂತ್ವವನ್ನು ಪ್ರಖರವಾಗಿ ಪ್ರತಿಪಾದಿಸುವ ನಾಯಕರು ಯಡಿಯೂರಪ್ಪಗೆ ಬೇಕಿಲ್ಲ ಮತ್ತು ರಾಜ್ಯದಲ್ಲಿ ಅವರ ಕುಟುಂಬಕ್ಕೆ ಪರ್ಯಾಯವಾಗಿ ಬೆಳೆಯುವ ಲಿಂಗಾಯತ ಲೀಡರ್ ಇಷ್ಟವಿಲ್ಲ, ಅದೇ ಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತುಳಿದರು ಎಂದು ಈಶ್ವರಪ್ಪ ಗಟ್ಟಿ ಧ್ವನಿಯಲ್ಲಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ: ವಿಜಯೇಂದ್ರ ಕ್ಷೇತ್ರದಲ್ಲಿ ಗುಡುಗಿದ ಕೆಎಸ್ ಈಶ್ವರಪ್ಪ